ರಾಜಕೀಯ

ನಂಜರಾಯಪಟ್ಟಣ ಗ್ರಾಪಂ: ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧ ಆಯ್ಕೆ

ಕುಶಾಲನಗರ, ಆ 05: ನಂಜರಾಯಪಟ್ಟಣ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ, ಉಪಾಧ್ಯಕ್ಷರಾಗಿ ಪಿ.ಎನ್.ಕುಸುಮ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ‌ ಹಾರಂಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಕಾರ್ಯನಿರ್ವಹಿಸಿದರು.
ಸಿ.ಎಲ್.ವಿಶ್ವ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬೆಂಬಲಿತ ನನ್ನ ತಂಡವನ್ನು ಚುನಾಯಿಸಿದ ಗ್ರಾಮಸ್ಥರ ವಿಶ್ವಾಸಕ್ಕೆ ಅನುಗುಣವಾಗಿ ಮೊದಲ‌ ಅವಧಿಯಲ್ಲಿ ಉತ್ತಮ ಅಧಿಕಾರಿ ನಡೆಸಿದ್ದೆವು. ಇಡೀ ಆಡಳಿತ ಮಂಡಳಿ‌ ಸಹಕಾರದಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೆ. 35 ಲಕ್ಷ ಇದ್ದ ಪಂಚಾಯತ್ ಆದಾಯವನ್ನು‌‌ 90 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ಈ ಬಾರಿ‌ ಕೂಡ ನಾನು ಅಧ್ಯಕ್ಷ ಸ್ಥಾನ ಅಲಂಕರಿಸಿಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಆರ್.ಕೆ.ಚಂದ್ರ, ಸಮೀರ, ಮಾವಾಜಿ ರಕ್ಷಿತ್, ಗಿರಿಜಮ್ಮ, ಜಾಜಿ, ಪಿಡಿಒ ಕಲ್ಪ, ಜೆಡಿಎಸ್ ಪ್ರಮುಖ ಪಿ.ಡಿ.ರವಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!