ಪ್ರಕಟಣೆ

ಕಾಂಗ್ರೆಸ್ ನಿಂದ‌ ಕಡೆಗಣನೆ: ಬಿಜೆಪಿ ಹೊರತುಪಡಿಸಿ ಇತರೆ ಪಕ್ಷದತ್ತ ರಫೀಕ್ ಚಿಂತನೆ

ಕುಶಾಲನಗರ, ಮೇ 04: ಕಾಂಗ್ರೆಸ್ ಪಕ್ಷದಲ್ಲಿ‌ ನಮ್ಮನ್ನು ಕಡೆಗಣನೆ‌ ಮಾಡುತ್ತಿದ್ದು ಸಧ್ಯದಲ್ಲಿಯೇ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಡಿಸಿಸಿ ಸದಸ್ಯ, ತಾಪಂ ಮಾಜಿ ಸದಸ್ಯ ಸುಂಟಿಕೊಪ್ಪದ ರಫೀಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರದಲ್ಲಿ ನಮ್ಮನ್ನು ಮೂಲೆಗುಂಪು‌ ಮಾಡಲಾಗುತ್ತಿದೆ. ಈ ಬಗ್ಗೆ ಬಿ.ಎಸ್.ಅನಂತಕುಮಾರ್ ಅವರೊಂದಿಗೆ ಸೇರಿ ಸುದ್ದಿಗೋಷ್ಠಿ ಮೂಲಕ ನೋವು ತೋಡಿಕೊಂಡಿದ್ದೇವೆ. ಆದರೆ ತಾನು ಬಿಜೆಪಿ ಸೇರ್ಪಡೆಯಾದ ಬಗ್ಗೆ ಗಾಳಿಸುದ್ದಿ ಹಬ್ಬಿಸಲಾಗುತ್ತಿದೆ. ಅನಂತ್ ಕುಮಾರತ ಅವರ ನಿರ್ಧಾರ ಬೇರೆ, ನನ್ನ‌ ನಿರ್ಧಾರ ಬೇರೆ.ನನ್ನ ಸ್ನೇಹಿತರ ಜೊತೆ ಚರ್ಚಿಸಿದೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಾಂಗ್ರೆಸ್‌ಗೆ ನಾನು ಬೇಡವಾದರೆ, ನಮ್ಮನ್ನು ಬೇಕಾದವರೊಂದಿಗೆ ಕೈಜೋಡಿಸುವ ಅನಿವಾರ್ಯತೆ ಇದೆ. ಆದರೆ ಬಿಜೆಪಿಗೆ ಮಾತ್ರ ಸೇರ್ಪಡೆಯಾಗುವುದಿಲ್ಲ. ರೂ 15 ಲಕ್ಷ ಪಡೆದು ಬಿಜೆಪಿ ಸೇರಿಸುವ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಇನ್ನೆರಡು ದಿನಗಳಲ್ಲಿ ನನ್ನ‌ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!