ರಾಜಕೀಯ

ವಾಟ್ಸಾಪ್ ನಲ್ಲಿ ವಿಡಿಯೋ ಶೇರ್: ಚುನಾವಣಾಧಿಕಾರಿಯಿಂದ ನೋಟಿಸ್ ಜಾರಿ

ಕುಶಾಲನಗರ, ಮಾ 31: ವಾಟ್ಸಾಪ್ ಗ್ರೂಪ್ ನಲ್ಲಿ ರಾಜಕೀಯ ಪ್ರೇರಿತ ಹೇಳಿಕೆಯ ತುಣುಕುಗಳನ್ನು ಹಂಚಿಕೊಳ್ಳುವ‌ ಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಮಜಾಯಿಷಿಕೆ ಕೋರಿ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿದೆ.
ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ‘ನಮ್ಮ ಕುಶಾಲನಗರ’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ರಾಜಕೀಯ ಪ್ರೇರಿತ ಹೇಳಿಕೆಯ ವಿಡಿಯೋ ಹಂಚಿಕೊಂಡಿದ್ದು, ಇವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಮಜಾಯಿಷಿಕೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಿ.ಪಿ.ಶಶಿಧರ್, ಮೋದಿ ಅವರ ಕಾರ್ಯಕ್ರಮವೊಂದರ ಬಗ್ಗೆ ವಿಮರ್ಷಕರೊಬ್ಬರ ವಿಮರ್ಷೆಯ ವಿಡಿಯೋ ಹಂಚಿಕೊಂಡಿದ್ದು ಇದು ಯಾವುದೇ ರಾಜಕೀಯ ಸಂಬಂಧಿಸಿದ ವಿಚಾರವಲ್ಲ‌ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!