ಕುಶಾಲನಗರ, ಮಾ 27: ಬಿದ್ದು ಸಿಕ್ಕಿದ ಚಿನ್ನದುಂಗುರದ ವಾರಸುದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಉಂಗುರುವನ್ನು ಕುಶಾಲನಗರದ ಶ್ರೀ ಗಣಪತಿ ದೇವರಿಗೆ ಅರ್ಪಿಸಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಕುಶಾಲನಗರದ ಹಿರಿಯ ಪತ್ರಿಕಾ ವಿತರಕ ವಿ.ಪಿ.ಪ್ರಕಾಶ್ ಅವರಿಗೆ ಚಿನ್ನದ ಉಂಗುರು ಬಿದ್ದು ಸಿಕ್ಕಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಬಳಿಕವೂ ವಾರಸುದಾರರು ಬಾರದ ಹಿನ್ನಲೆಯಲ್ಲಿ ದೇವಾಲಯಕ್ಕೆ ಅರ್ಪಿಸಿದ್ದಾರೆ. ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರಬಾಬು, ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಅವರಿಗೆ 18 ಸಾವಿರ ಮೌಲ್ಯದ ಉಂಗುರು ಹಸ್ತಾಂತರಿಸಲಾಯಿತು.
Back to top button
error: Content is protected !!