ಕುಶಾಲನಗರ, ಮಾ 22:ಕಳೆದ ಎರಡು ದಶಕಗಳಿಂದ ಅಭಿವೃದ್ದಿ ಕಾಣದ ಗುಂಡುರಾವ್ ಬಡಾವಣೆ ರಸ್ತೆ ಡಾಂಬರೀಕರಣಗೊಳಿಸಲಾಯಿತು.
ಕುಶಾಲನಗರ ಪುರಸಭೆ ವ್ಯಾಪ್ತಿಯ 15ನೇ ವಾರ್ಡ್ ನಲ್ಲಿನ ಐಡಿಎಸ್ಎಂಟಿ ಯೋಜನೆಗೆ ಒಳಪಡುವ ಈ ರಸ್ತೆಯನ್ನು ರೂ 43 ಲಕ್ಷ ವೆಚ್ಚದಲ್ಲಿ 400 ಮೀಟರ್ ಉದ್ದಕ್ಕೆ ಅಭಿವೃದ್ಧಿಗೊಳಿಸಲಾಗಿದೆ.ಶುಕ್ರವಾರ ಈ ರಸ್ತೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ತಿಳಿಸಿದರು. ಈಗಾಗಲೆ 87 ಲಕ್ಷ ವೆಚ್ಚದಲ್ಲಿ ಈ ಭಾಗದಲ್ಲಿ ಪುರಸಭೆಯಿಂದ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆಗಳನ್ನು ಕೂಡ ಹಂತಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.ವಾರ್ಡ್ ಸದಸ್ಯ ಎಂ.ಕೆ.ದಿನೇಶ್ ಮಾತನಾಡಿ, ಸರಕಾರ ಯಾವುದೇ ಆದರೂ ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಈ ಸಂದರ್ಭ ಪುರಸಭೆ ಸದಸ್ಯರಾದ ಬಿ.ಎಲ್.ಜಗದೀಶ್, ಪ್ರಮೋದ್ ಮುತ್ತಪ್ಪ ಇದ್ದರು.
Back to top button
error: Content is protected !!