ಕುಶಾಲನಗರ, ಡಿ 18:
ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮದ ಐಎನ್ಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಡನ್ ಲೀಗ್ ಪಂದ್ಯಾವಳಿಯಲ್ಲಿ ಮೊದಲ ಬಹುಮಾನ ಹಾಗು ಆಕರ್ಷಕ ಟ್ರೋಫಿ ಯನ್ನು ಜಂಪ್ ಸ್ಮಾಷ್ ತಂಡದ (ಶರತ್ ತಂಡ) ಪಡೆದುಕೊಂಡರೆ ಎರಡನೇ ಬಹುಮಾನವನ್ನು ಟೀಂ ಎಲ್ ಜೆ ತನ್ನದಾಗಿಸಿಕೊಂಡಿತು. ಮೂರನೇ ಬಹುಮಾನಕ್ಕೆ ಚಂದ್ರಶೇಖರ್ ತಂಡ ತೃಪ್ತಿ ಪಟ್ಟುಕೊಂಡಿತು. ಕ್ರೀಡಾಂಗಣದ ಮಾಲೀಕ ಐಚೆಟ್ಟಿರ ಸೋಮಯ್ಯ ಹಾಗು ಉದ್ಯಮಿ ಕುಶಾಲನಗರದ ಈರುಳ್ಳಿ ಮಹೇಶ್ ಎರಡು ದಿನಗಳ ಪಂದ್ಯಾವಳಿಗೆ ಚಾಲನೆ ನೀಡಿದ್ದರು.
ಪ್ರಾಂಚೈಸಿಗಳು ಆಟಗಾರರನ್ನು ಬಿಡ್ ನಲ್ಲಿ ಖರೀದಿಸಲಾಗಿತ್ತು. ಪಂದ್ಯಾವಳಿಯಲ್ಲಿ
ಏಳು ತಂಡಗಳೊಂದಿಗೆ 84 ಆಟಗಾರರಿದ್ದರು.
ಪ್ರಸನ್ನ ಹಾಗು ಸಂತೋಷ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಪಂದ್ಯಾವಳಿಯನ್ನು ಸಿ.ಎಂ.ಮಹೇಶ್ ಕುಮಾರ್, ಸುಧಾಕರ್, ಬಿ.ಡಿ.ಹರ್ಷ, ಮಹೇಶ್, ಜಯದೀಪ್, ಎ.ಕೆ.ರಾಜ, ಅಭಿಷೇಕ್, ನಾಗರಾಜು, ದೀಪು, ಪದ್ಮ ಮಹೇಶ್, ಐಚೆಟ್ಟಿರ ಪೊನ್ನಪ್ಪ ಇದ್ದರು.
Back to top button
error: Content is protected !!