ಕುಶಾಲನಗರ, ಡಿ 01: ಕುಶಾಲನಗರದ ಗುಂಡುರಾವ್ ಬಡಾವಣೆಯಲ್ಲಿ ಬುಧವಾರ ಅಪರಿಚಿತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಚರಂಡಿಗೆ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಮೈಸೂರು ಜಿಲ್ಲೆಯ ಬೆಳಗೊಳ ನಿವಾಸಿ ರವಿ (28) ಎಂದು ತಿಳಿದುಬಂದಿದೆ. ಕುಶಾಲನಗರದ ಪೊಲೀಸ್ ಕ್ವಾರ್ಟರ್ಸ್ ಬಳಿಯಲ್ಲಿರುವ ತನ್ನ ಸಹೋದರನ ಮನೆಗೆ ವಾರದ ಹಿಂದೆ ರವಿ ಆಗಮಿಸಿದ್ದ ಎನ್ನಲಾಗಿದೆ. ವಿಪರೀತ ಮದ್ಯ ಸೇವನೆ ಕಾರಣ ಮೃತಪಟ್ಟಿರುವ ಶಂಕೆ ವ್ಯಕ್ತಗೊಂಡಿದೆ.
Back to top button
error: Content is protected !!