ಕಾರ್ಯಕ್ರಮ

ಪರವಾನಗಿ ಪಡೆಯದ ಅಂಗಡಿ ಮಳಿಗೆಗಳಿಗೆ‌ ಬೀಗ ಜಡಿದ ಗ್ರಾಪಂ

ಕುಶಾಲನಗರ, ನ 15: ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ‌ಪರವಾನಗಿ‌ ಪಡೆಯದ ಅಂಗಡಿಗಳಿಗೆ‌ ಗ್ರಾಪಂ ವತಿಯಿಂದ ಬೀಗ ಜಡಿಯಲಾಯಿತು.
ಗ್ರಾಮ ಪಂಚಾಯತಿ ವತಿಯಿಂದ ಮೂರು ಬಾರಿ ನೋಟೀಸ್ ನೀಡಿ, ಸೂಚಿಸಿದರೂ ಸಹ ಪರವಾನಗಿ ಪಡೆದುಕೊಳ್ಳದೆ ಅಂಗಡಿಯನ್ನು ನಡೆಸುತ್ತಿದ್ದ 5 ಅಂಗಡಿಗಳನ್ನು ಮುಚ್ಚಿಸಲಾಯಿತು.
ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ಪಂಚಾಯತಿ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿಗಳ ತಂಡ ಪರವಾನಿಗೆ ಪಡೆದುಕೊಳ್ಳದ ಅಂಗಡಿಗಳಿಗೆ ಬೀಗ ಹಾಕಿದರು.
ಕೆಲವು ಅಂಗಡಿ ಮಾಲಿಕರು ಬೀಗ ಹಾಕಲು ಬರುತ್ತಿದ್ದ ಸಂದರ್ಭದಲ್ಲಿ ಹಣವನ್ನು ಗ್ರಾಮ ಪಂಚಾಯತಿಗೆ ಕಟ್ಟಿದ ಪ್ರಸಂಗ ನಡೆಯಿತು.
ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಎನ್. ಎನ್. ಧರ್ಮಪ್ಪ, ಸದಸ್ಯರಾದ ಪ್ರದೀಪ್, ಶ್ರೀಕಾಂತ್, ಸರಿತಾ ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ ರವಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!