ಪ್ರಕಟಣೆ
ಕುಪ್ಪಣಮಾಡ ಮೇಘನ ಮುತ್ತಮ್ಮಗೆ ‘ಮಿಸ್ ಇಂಡಿಯಾ ಟೀನ್ ಆ್ಯಂಡ್ ಎಲಿಗೆಂಟ್ ಕ್ರೌನ್ ಪ್ರಶಸ್ತಿ

ಕುಶಾಲನಗರ, ನ 08: ಗೋವಾದಲ್ಲಿರುವ ಲಾ ಗ್ರಾಸಿನಾ ರೆಸಾರ್ಟ್ನಲ್ಲಿ ಜಟ್ರೇಟ್ ಕೌರ್, ನಂದಿನ ನಾಗರಾಜ್ ತಂಡ ಆಯೋಜಿಸಿದ್ದ ಮಿಸಸ್ ಇಂಡಿಯಾ ಐಯಾಮ್ ಪವರ್‌ಫುಲ್ ಆ್ಯಂಡ್ ಇಂಡಿಯಾಸ್ ಚರ್ಮಿಂಗ್ ಫೇಸ್ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಪಿ ಆ್ಯಂಡ್ ಜಿ ಕ್ರಿಯೆಷನ್ಸ್ ತಂಡದ
ಕುಪ್ಪಣಮಾಡ ಮೇಘನ ಮುತ್ತಮ್ಮ ಹದಿಹರೆಯದ ವಿಭಾಗದಲ್ಲಿ ‘ಮಿಸ್ ಇಂಡಿಯಾ ಟೀನ್ ಆ್ಯಂಡ್ ಎಲಿಗೆಂಟ್ ಕ್ರೌನ್ ಮುಡಿಗೇರಿಸಿಕೊಂಡರು.
ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯ ೯ನೇ ತರಗತಿ ವಿದ್ಯಾರ್ಥಿಯಾಗಿರುವ ಮೇಘನ ಬೆಂಗಳೂರಿನಲ್ಲಿ ನಡೆದ ವಾಲ್ ಆಫ್ ಫೇಮ್ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದಳು.
ಗೋಣಿಕೊಪ್ಪ ಅರುವತ್ತೊಕ್ಲು ಗ್ರಾಮದ ನಿವಾಸಿಯಾಗಿರುವ ಕೆ.ಪಿ. ಚಾಮಿ ಮತ್ತು ಕೆ.ಎಂ. ಜಾನ್ಸಿ ಅವರ ಪುತ್ರಿಯಾಗಿರುವ ಈಕೆ ಕೊಡವ ಸಿನಿಮಾ ನಟಿ ಕೆ.ಎಂ. ಭೂಮಿಕಾ ಅವರ ಸಹೋದರಿಯಾಗಿದ್ದಾಳೆ.


