ಪ್ರಕಟಣೆ

ಪ್ರತಿಭಟನೆ ಕೈಬಿಡಿ-ಶೀಘ್ರದಲ್ಲಿ ಸೀಗೆಹೊಸೂರು-ಮಸಗೋಡು ರಸ್ತೆ ಅಭಿವೃದ್ದಿ ಕಾಮಗಾರಿ

ಕುಶಾಲನಗರ, ಅ 09: ಮಸಗೋಡು – ಯಲಕನೂರು-ಕಣಿವೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರೂ ಸಹ ರಾಜಕೀಯ ಪ್ರೇರಿತವಾಗಿ ಸೋಮವಾರ ಪ್ರತಿಭಟನೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲಾ ಎಂದು ಆಯಾ ಗ್ರಾಮ ವ್ಯಾಪ್ತಿಯ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೂಡಿಗೆ ಗ್ರಾಪಂ‌ ಮಾಜಿ ಸದಸ್ಯರಾದ ಸೀಗೆಹೊಸೂರು ವಿ.ಎಲ್.ಧನಂಜಯ, ಜಿ.ಎಂ.ಜಗದೀಶ್, ಕೃಷ್ಣ, ತಾಕೇರಿ‌ಮಣಿ, ಎಚ್.ಕೆ.ಮೋಹನ್ ಮತ್ತಿತರರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸೀಗೆಹೊಸೂರು- ಯಲಕನೂರು ಮಸಗೋಡ – ಕಣಿವೆ ರಸ್ತೆಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಲೋಕೋಪಯೋಗಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ 15 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ‌ ಶೀಘ್ರದಲ್ಲೇ ಹಂತಹಂತವಾಗಿ ವ್ಯವಸ್ಥಿತವಾದ ರಸ್ತೆಯ ನಿರ್ಮಾಣ ಕಾಮಗಾರಿ ಅರಂಭವಾಗಲಿದೆ ಎಂದು ತಿಳಿಸಿದ್ದರೂ ಕೂಡ ಕೆಲವರು ವೈಯಕ್ತಿಕ ದ್ವೇಷದಿಂದ ರಾಜಕೀಯ ಪ್ರೇರಿತ ಪ್ರತಿಭಟನೆ ಹಮ್ಮಿಕೊಂಡಿರುವುದು ಸರಿಯಲ್ಲ. ಶೀಘ್ರದಲ್ಲೇ ರಸ್ತೆ ಕಾಮಗಾರಿ ನಡೆಯಲಿರುವ ಕಾರಣ ರಸ್ತೆ ಅಭಿವೃದ್ದಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಕೈಬಿಟ್ಟು ಕೆಲದಿನ ಸಮಾಧಾನ ವಹಿಸುವಂತೆ ಧನಂಜಯ ಮತ್ತಿತರರು ಗ್ರಾಮಸ್ಥರಲ್ಲಿ‌ ಈ ಮೂಲಕ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!