ಸುದ್ದಿಗೋಷ್ಠಿ

ಸೇವಾ ಭದ್ರತೆ, ವೇತನ ತಾರತಮ್ಯ, ಸೇವಾ ನಿವೃತ್ತಿಯ ನಂತರ ಇಡುಗಂಟು ಹೆಚ್ಚಳ ಮತ್ತು ರಜಾ ಸೌಲಭ್ಯಗಳ ಬೇಡಿಕೆ ಈಡೇರಿಸಲು ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಒತ್ತಾಯ

ಕುಶಾಲನಗರ, ನ 26: ದಶಕಗಳಿಂದ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಸೇವಾ ಭದ್ರತೆ, ವೇತನ ತಾರತಮ್ಯ, ಮತ್ತು ಅನೇಕ ನೋವುಗಳನ್ನು ಹೊತ್ತಿರುವ ನಮ್ಮನ್ನು ನಮ್ಮ ಬೇಡಿಕೆಗಳನ್ನು ಸರ್ಕಾರ ಉದಾಸೀನ ಮಾಡುತ್ತಿದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಹನುಮಂತ ಗೌಡ ಆರ್. ಕಲ್ಮನಿ ಆಕ್ರೋಶ ವ್ಯಕ್ತಪಡಿಸಿದರು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ನಮ್ಮ ಸಮಸ್ಯೆಗಳನ್ನು ಹೊತ್ತು ಅನೇಕ ಬಾರಿ ರಾಜ್ಯ ಸರ್ಕಾರದ ಮುಂದೆ ನಮ್ಮ ಅಳಲನ್ನು ತೋಡಿಕೊಂಡಿದ್ದೇವೆ. ಬರುವ ಚಳಿಗಾಲದ ಅಧಿವೇಶನ ವೇಳೆ ಮತ್ತೊಮ್ಮೆ ನಾವು ಹೋರಾಟಕ್ಕೆ ಅಳಿಯಾಗುತ್ತಿದ್ದೇವೆ ನಾಡಿನಾದ್ಯಂತ ಇರುವ ಅತಿಥಿ ಉಪನ್ಯಾಸಕ ಮತ್ತು ಶೈಕ್ಷಣಿಕ ಸಂಯೋಜಕ ಬಂಧುಗಳು ದೃಢ ಸಂಕಲ್ಪದೊಂದಿಗೆ ಹಾಸಿಗೆ ಸಮೇತ ಬೆಳಗಾವಿಯ ಹೋರಾಟಕ್ಕೆ ಬರಬೇಕು ಎಂಬ ಕರೆ ನೀಡಲು ಸಂಘಟನೆಯ ರಾಜ್ಯಾಧ್ಯಕ್ಷನಾಗಿ ಕೊಡಗು ಜಿಲ್ಲೆಗೆ ಬಂದಿದ್ದೇನೆ. ಸರ್ಕಾರ ಈಗಾಗಲೇ ನಮ್ಮಲ್ಲೇ ಶೈಕ್ಷಣಿಕ ಸಂಯೋಜಕರು ಮತ್ತು ಅತಿಥಿ ಉಪನ್ಯಾಸಕರು ಎಂದು ವಿಭಜನೆ ಮಾಡಿ ತಾರತಮ್ಯ ಮತ್ತು ಗೊಂದಲ ಹುಟ್ಟು ಹಾಕಿದೆ ಆದರೆ ನಾವೆಲ್ಲರೂ ಒಂದೇ ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಮೂರು ವರ್ಷದ ಬದಲಾಗಿ, ಮಧ್ಯದಲ್ಲಿ ಸೇವೆಯನ್ನು ಮೋಟಕುಗೊಳಿಸದೆ ಕಾಯಂಗೊಳಿಸಬೇಕು ಹಾಗೆಯೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸೇವಾ ಭದ್ರತೆ ನೀಡಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ
ಸರ್ಕಾರದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ನಮಗೆ ಸೇವಾ ಭದ್ರತೆ ನೀಡಬೇಕು. 2009ರ ಎಂಫಿಲ್ ಪದವಿಯನ್ನು ಪರಿಗಣಿಸಬೇಕು. ಸೇವಾ ನಿವೃತ್ತಿ ಬಳಿಕ ನೀಡುವ 5 ಲಕ್ಷ ಇಡುಗಂಟನ್ನು 50 ಲಕ್ಷ ರೂಪಾಯಿಗೆ ಏರಿಕೆ ಮಾಡಬೇಕು ಜೊತೆಗೆ ಅತಿಥಿ ಉಪನ್ಯಾಸಕರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ವೇತನ ತಾರತಮ್ಯಗಳನ್ನು ಸರಿಪಡಿಸಬೇಕು. ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಅಧಿವೇಶನದಲ್ಲಿ ಹೋರಾಟಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸುತಿದ್ದೇವೆ. ಇದರಲ್ಲಿ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರು ಹೋರಾಟದ ದಿನ ನಿಗದಿಯಾದ ನಂತರ ಹಾಸಿಗೆ ಸಮೇತ ಬೆಳಗಾವಿಗೆ ಬರಬೇಕು. ಈ ಸಲ ಪ್ರತಿಬಾರಿಯಂತೆ ಸಾಂಕೇತಿಕ ಹೋರಾಟದ ಬದಲು ಬೇಡಿಕೆ ಈಡೇರುವವರೆಗೆ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದು ಆಗ್ರಹಪೂರ್ವಕ ವಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸುತ್ತಾ ತಮ್ಮ ಸೇವಾ ಭದ್ರತೆ, ವೇತನ ತಾರತಮ್ಯ, ರಜಾ ಸೌಲಭ್ಯಗಳ ವಿಚಾರ ಕುರಿತ ಅನೇಕ ನೋವಿನ ಘಟನೆಗಳನ್ನು, ಅನೇಕ ಸಮಸ್ಯೆಗಳನ್ನು ಅತಿಥಿ ಉಪನ್ಯಾಸಕರಾದ ಡಾ. ಸೋಮಣ್ಣ, ಡಾ. ಮಹೇಂದ್ರ, ಮನೋಜ್ ಕುಮಾರ್, ಸರಿತಾ, ಅವರು ವಿವರಿಸಿದರು. ಅವರೊಂದಿಗೆ ಅತಿಥಿ ಉಪನ್ಯಾಸಕರು ಡೀನ, ಶಿವಣ್ಣ,ರಾಜೇಶ್, ಸಿದ್ದರಾಮಯ್ಯಗೌಡ, ಸುನಿಲ್ ಕುಮಾರ್, ಸೂರ್ಯ ಕುಮಾರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!