ಧಾರ್ಮಿಕ

ಕುಶಾಲನಗರ ಗೌಡ ಸಮಾಜದ ವತಿಯಿಂದ ಅದ್ದೂರಿಯಾಗಿ ಹುತ್ತರಿ ಹಬ್ಬ ಆಚರಣೆ

ಕುಶಾಲನಗರ, ನ 26:
ಕುಶಾಲನಗರ ಗೌಡ ಸಮಾಜದ ವತಿಯಿಂದ ಅದ್ದೂರಿಯಾಗಿ ಹುತ್ತರಿ ಹಬ್ಬ ಆಚರಣೆ ನಡೆಯಿತು.
ಕುಶಾಲನಗರ ಗೌಡ ಸಮಾಜ ಮತ್ತು ಸಹ ಸಂಘಟನೆಗಳಾದ ಗೌಡ ಮಹಿಳಾ ಒಕ್ಕೂಟ, ಪದ್ಮಾವತಿ ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ನಿವೃತ್ತ ಸೈನಿಕರ ಕೂಟ, ಗೌಡ ಸಾಂಸ್ಕೃತಿಕ ವೇದಿಕೆ ಮತ್ತು ಗೌಡ ಯೂತ್ ಕ್ಲಬ್ ಸಹಯೋಗದಲ್ಲಿ ನಡೆದ ಹಬ್ಬ ಆಚರಣೆಯಲ್ಲಿ ಹಿರಿಯರಾದ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಅವರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಕದಿರು ಗುತ್ತಿಯನ್ನು ಹೊತ್ತು ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ನೇತೃತ್ವದಲ್ಲಿ ಮೆರವಣಿಗೆ ಮುಖಾಂತರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಗುಮ್ಮನಕೊಲ್ಲಿಯಲ್ಲಿರುವ ಗೌಡ ಯುವಕ ಸಂಘದ ಗದ್ದೆಗೆ ತೆರಳಿ ಕದಿರು ಕುಯ್ದು ನೆರೆದಿರುವ ಸಾರ್ವಜನಿಕರಿಗೆ ಮತ್ತು ಸಮುದಾಯ ಬಾಂಧವರಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭ ಗೌಡ
ಸಮಾಜದ ಕಾರ್ಯದರ್ಶಿ ಕುಲ್ಲಚ್ಚನ ಹೇಮಂತ್, ಖಜಾಂಚಿ ಬಳಡ್ಕ ವಿಜಯ್ ಕುಮಾರ್, ಸಹ ಕಾರ್ಯದರ್ಶಿ ಡಬ್ಬಡ್ಕ ದಾಟಿ ಶಾಂತಕುಮಾರಿ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಯ್ಯಮುಡಿ ಶ್ರೀವಾಣಿ ಸುರೇಶ್, ಪದ್ಮಾವತಿ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮರದಾಳು ಬೋಜಮ್ಮ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪಾಣತ್ತಲೆ ಪುಷ್ಪ, ಗೌಡ ನಿವೃತ್ತ ಸೈನಿಕರ ಕೂಟದ ಅಧ್ಯಕ್ಷ ದೇವಜನ ಚಿಣ್ಣಪ್ಪ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೂಧನ ಗೋಪಾಲ, ಗೌಡ ಯೂತ್ ಕ್ಲಬ್ ಸಂಚಾಲಕರಾದ ಕಲ್ಲುಮುಟ್ಲು ಅನುದೀಪ್, ಚಿಲ್ಲನ ಅಚಲ್ ಗೌಡ ಮತ್ತು ಆಡಳಿತ ಮಂಡಳಿ ಸದಸ್ಯರು ಜನಾಂಗ ಬಾಂಧವರು ಸಾರ್ವಜನಿಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!