ಕುಶಾಲನಗರ ನ 25:: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಪ್ರತಿಮೆ ಕ್ಷೇತ್ರದಲ್ಲಿ 165ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.
ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು.
ಬೆಂಗಳೂರಿನ ಸುನಂದಾ ಕೌಶಿಕ್ ಮತ್ತು ಕುಟುಂಬಸ್ಥರು ದಿನದ ಪೂಜಾ ಸೇವಾರ್ಥ ನೆರವೇರಿಸಿದರು. ಮಹದೇವಪ್ಪ, ಇಂದಿರಾ ಮತ್ತು ಮಂಜುಳಾ ಕುಟುಂಬದಿಂದ ದಿನದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಾರವು ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್ ಅವರು,
ಪ್ರತಿ ತಿಂಗಳ ಹುಣ್ಣಿಮೆ ಪೂಜೋತ್ಸವಕ್ಕೆ ಸಹಕಾರ ನೀಡುತ್ತಿರುವ ದಾನಿಗಳು ಹಾಗೂ ಪಾಲ್ಗೊಳ್ಳುವ ಭಕ್ತರಿಗೆ ಕಾವೇರಿ ಮಾತೆಯ ಅನುಗ್ರಹ ಸದಾ ದೊರೆಯಲಿದೆ ಎಂದು ತಿಳಿಸಿದರು.
ಹುಣ್ಣಿಮೆ ಪೂಜೋತ್ಸವ ಮತ್ತು ವ್ಯವಸ್ಥೆಯ ಕುರಿತು ಭಕ್ತರು ತಮ್ಮ ಅನಿಸಿಕೆ ಹಂಚಿಕೊಂಡರು.
ಸತೀಶ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ
ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿಮಣಿ, ರುದ್ರೇಶ್, ವೆಂಕಪ್ಪ, ದೇವರಾಜು, ರವಿ, ಮಹಾತ್ಮಾ, ಶಂಕರ್ ಕೊಪ್ಪ, ಜಬಿವುಲ್ಲಾ, ಅಬ್ದುಲ್ ಅಜೀಜ್, ಅಬೀಬ್ ರೆಹಮಾನ್ ಮತ್ತಿತರರು ಇದ್ದರು.
Back to top button
error: Content is protected !!