ಧಾರ್ಮಿಕ

ಗುಡ್ಡೆಹೊಸೂರು–ಬಸವನಹಳ್ಳಿ ಶ್ರೀ ವೀರಾಂಜನೇಯ ಸೇವಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಉಲ್ಲಾಸ್ ಕುಮಾರ್ ಜಿ ಆಯ್ಕೆ

6ನೇ ವರ್ಷದ ಅದ್ದೂರಿ ಹನುಮ ಜಯಂತಿ ಉತ್ಸವಕ್ಕೆ ಭರ್ಜರಿ ಸಿದ್ಧತೆ – ಸತತ ಮೂರನೇ ಬಾರಿ ಪ್ರಥಮ ಬಹುಮಾನದ ಗುರಿ

ಕುಶಾಲನಗರ, ನ 24:

ಶ್ರೀ ವೀರಾಂಜನೇಯ ಸೇವಾ ಸಮಿತಿ, ಗುಡ್ಡೆಹೊಸೂರು–ಬಸವನಹಳ್ಳಿ ವತಿಯಿಂದ ಆಯೋಜಿಸಲಾಗುತ್ತಿರುವ 6ನೇ ವರ್ಷದ ಅದ್ದೂರಿ ಹನುಮ ಜಯಂತಿ ಉತ್ಸವದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಈ ವರ್ಷದ ಉತ್ಸವದ ಯಶಸ್ಸಿಗಾಗಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಶ್ರೀ ಉಲ್ಲಾಸ್ ಕುಮಾರ್ ಜಿ, ಉಪಾಧ್ಯಕ್ಷರಾಗಿ ಶ್ರೀ ನಿತ್ಯಾನಂದ, , ಗೌರವಧ್ಯಕ್ಷರಾಗಿ ಅರುಣ್ ಎಸ್ ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ, ಸಹಕಾರ್ಯದರ್ಶಿಯಾಗಿ ಕಿರಣ್ ಬಿ.ಎಂ. ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ರಾಜೇಶ್ ಆರ್ ಆಯ್ಕೆಯಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶೋಭಾಯಾತ್ರೆಯಲ್ಲಿ ಸತತವಾಗಿ ಪ್ರಥಮ ಬಹುಮಾನ ಪಡೆದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿರುವ ಗುಡ್ಡೆಹೊಸೂರಿನ ಶ್ರೀ ವೀರಾಂಜನೇಯ ಸೇವಾ ಸಮಿತಿಯ ಮಂಟಪವು ಈ ಬಾರಿಯೂ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಸಜ್ಜಾಗುತ್ತಿದೆ.

ಈ ಬಾರಿ ಹ್ಯಾಟ್ರಿಕ್ ಪ್ರಥಮ ಬಹುಮಾನದ ಸಾಧನೆ ಮಾಡುವ ಸಂಕಲ್ಪದೊಂದಿಗೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ತನು, ಮನ, ಧನದ ಸಹಕಾರದೊಂದಿಗೆ ಅದ್ದೂರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಕ್ತಿ, ಶ್ರದ್ಧೆ, ಒಗ್ಗಟ್ಟು ಹಾಗೂ ಸಂಘಟಿತ ಪ್ರಯತ್ನದ ಮೂಲಕ 6ನೇ ವರ್ಷದ ಹನುಮ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಮಿತಿ ಸಜ್ಜಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!