ಕುಶಾಲನಗರ, ನ 22:
ಕುಶಾಲನಗರ ಕೇರಳ ಸಮಾಜದ (ರಿ) ನೂತನ ಸಾಲಿನ ಅಧ್ಯಕ್ಷರಾಗಿ ಸಮಾಜದ ಹಾಲಿ ಅಧ್ಯಕ್ಷರಾದ ಪಿ.ರವೀಂದ್ರನ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು .ಆಯ್ಕೆಗೆ ಮುನ್ನ ಕೇರಳ ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಕಟ್ಟದ ಸಭಾಂಗಣದಲ್ಲಿ ಅಧ್ಯಕ್ಷರಾದ ಪಿ.ರವೀಂದ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು .ಸಭೆಯಲ್ಲಿ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಓದಿ ಅನುಮೋದಿಸಲಾಯಿತು ,ಕಳೆದ ವರ್ಷದ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು ,ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು ,ನಂತರ ಸಮಾಜದ ಪ್ರಸ್ತುತ ಚಟುವಟಿಕೆಗಳು ಹಾಗೂ ಮುಂದಿನ ಯೋಜನೆಗಳು ,ವಾರ್ಷಿಕ ಸದಸ್ಯತ್ವ ಶುಲ್ಕ ಹಾಗೂ ಬಾಕಿ ಇರುವ ಶುಲ್ಕಗಳ ಕುರಿತು ,ಮರಣ ನಿಧಿಯ ಪ್ರಸ್ತುತ ಠೇವಣಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ನಂತರ ಪ್ರಸ್ತುತ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಯಿತು.ನಂತರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಮತ್ತೊಮ್ಮೆ ಅಧ್ಯಕ್ಷರಾಗಿ ಪಿ.ರವೀಂದ್ರನ್ ಮತ್ತು ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Back to top button
error: Content is protected !!