ಅಪಘಾತ

ಕುಶಾಲನಗರದಲ್ಲಿ ಅಗ್ನಿ ಅನಾಹುತ: ಗೃಹಬಳಕೆ ವಸ್ತುಗಳು ಬೆಂಕಿಗಾಹುತಿ

ಕುಶಾಲನಗರ, ನ 11: ಆಕಸ್ಮಿಕ ಬೆಂಕಿ‌ ಅನಾಹುತದಿಂದಾಗಿ ಮನೆಯೊಂದರ ಗೃಹ ಬಳಕೆ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಮುಳ್ಳುಸೋಗೆ ಓಂಕಾರ್ ಬಡಾವಣೆಯಲ್ಲಿ ಮಂಗಳವಾರ ‌ರಾತ್ರಿ ನಡೆದಿದೆ.

ವಿಜಯಕುಮಾರ್ ಎಂಬವರ ಮಾಲೀಕತ್ವದ ಫ್ಲಾಟ್ ನಲ್ಲಿ ಬಾಡಿಗೆಗೆ ಇರುವ ಅಶ್ವಿನ್ ಎಂಬವರು ಸಮೀಪದ ಕುಟುಂಬಸ್ಥರ ಮನೆಗೆ ತೆರಳಿದ್ದ ಸಂದರ್ಭ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮನೆಯೊಳಗೆ ಸೋಫಾ, ಟಿವಿ‌ ಮತ್ತಿತರು ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಹಾನಿಯಾಗಿವೆ. ಪಟಾಕಿ ಯಿಂದ ಅವಘಡ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು‌ ಪರಿಶೀಲನೆ‌ ಕಾರ್ಯ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!