ಕುಶಾಲನಗರ, ನ 06 : ಮಕ್ಕಳ ಕಲಿಕೆಗೆ ಅತ್ಯಾಧುನಿಕ ಶೈಲಿಯ ಪ್ರಯೋಗಾಲಯಗಳು ಬಹಳಷ್ಟು ಉಪಯುಕ್ತ ವಾಗಿದ್ದು, ಪ್ರಯೋಗಾಲಯಗಳು ಹಾಗೂ ಸಂಶೋಧನೆಗಳು ಸಾಧನೆಯ ಮೆಟ್ಟಿಲು ಗಳು ಎಂದು ಸೋಮವಾರಪೇಟೆ ಹಾಗೂ ಕುಶಾಲನಗರ ಅವಳಿ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹೇಳಿದರು.
ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಪ್ರಯೋಗಾಲಯಗಳ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿಜ್ಞಾನದ ಕುರಿತು
ಶಿಕ್ಷಕರು ಹೆಚ್ಚು ಹೆಚ್ಚು ಅಧ್ಯಯನ ಶೀಲರಾಗುವ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕಿದೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಇಂದಿನ ಮಕ್ಕಳಿಗೆ ನೋಬೆಲ್ ಪಾರಿತೋಷಕ ಗಳು ಲಭಿಸುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಕೃಷ್ಣಪ್ಪ ಆಶಿಸಿದರು.
ಮತ್ತೋರ್ವ ಅತಿಥಿ ಕೊಡಗು ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ.ಐ.ಕೆ.ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದುವ ಮೂಲಕ
ಸಾಧನೆಯ ಪಥದಲ್ಲಿ ಮುನ್ನಡೆಯಬೇಕು.
ನಿಸರ್ಗದ ಸುಂದರ ತಾಣದಲ್ಲಿ ಇರುವ ಜ್ಞಾನಗಂಗಾ ಶಾಲೆಯಲ್ಲಿ ಇಂದಿನ ಆಧುನಿಕ ಜಗತ್ತಿಗೆ ಅಗತ್ಯವಿರುವ ಅತ್ಯಾಕರ್ಷಕವಾದ ಎಐ, ರೊಬೋಟಿಕ್, ಕಂಪ್ಯೂಟರ್, ಗ್ರಂಥಾಲಯ ಮತ್ತಿತರ ವಿಭಾಗಗಳನ್ನು ವಿದ್ಯಾರ್ಥಿಗಳು ಹೆಚ್ಚು ಬಳಕೆ ಮಾಡಿಕೊಳ್ಳಬೇಕೆಂದು ಪ್ರೊ.ಮಂಜುಳಾ ಕರೆಕೊಟ್ಟರು.
ಜ್ಞಾನಗಂಗಾ ಶಾಲೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ನೂತನ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು ಶಾಲೆಯಲ್ಲಿ ಇದೂವರೆಗೂ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಇರುವುದು ಸಂಸ್ಥೆಗೆ ಹೆಮ್ಮೆ ಎಂದರು.
ಇನ್ನೋರ್ವ ಅತಿಥಿ ಕುಶಾಲನಗರದ ನಿವೃತ್ತ ಹವಾಲ್ದಾರ್ ಅಮೆ ಜನಾರ್ದನ್
ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ದಿನಗಳಲ್ಲಿ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ದೇಶಪ್ರೇಮ ಬೆಳೆಸಿಕೊಳ್ಳಬೇಕು.
ನಿತ್ಯವೂ
ಹಸಿರು ಪರಿಸರದಲ್ಲಿರುವ ಕೊಡಗಿನ ಯುವಕರಲ್ಲಿ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದ್ದು ಸೇನೆಗೆ ಸೇರಬಯಸುವ ಯುವಕರಿಗೆ ಬಹಳಷ್ಟು ನಿರಾಸೆಯಾಗುತ್ತಿದೆ.
ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವ ಶಕ್ತಿ ಮೊಬೈಲ್ ಗಳನ್ನು ಹೆಚ್ಚು ಬಳಸದೇ ಕಣ್ಣಿನ ಆರೋಗ್ಯ ಹೊಂದಲು ಕರೆಕೊಟ್ಟರು.
ನುರಿತ ಕಂಪ್ಯೂಟರ್ ತಜ್ಞ ಕೆ.ಪಿ.ಚಂದ್ರಶೇಖರ್,
ಅಬಾಕಸ್ ಸಂಸ್ಥೆಯ ಪ್ರಸಾದ್,
ಉದ್ಯಮಿ ಶಿವಪ್ರಸಾದ್, ಶಾಲೆಯ ನಿರ್ದೇಶಕರಾದ ಅನಂತಪದ್ಮನಾಭ, ಶೋಭಾ ಅನಂತಪದ್ಮನಾಭ,
ಶಾಲೆಯ ಪ್ರಾಂಶುಪಾಲೆ ಜೆ.ಎ.ಸಂಜನಾ,
ಶಾಲೆಯ ಆಡಳಿತಾಧಿಕಾರಿ ಮರ್ವಿನ್ ಕೊರಿಯಪ್ಪ, ಶಿಕ್ಷಕ ಜಿ.ಎಸ್.ಪುನೀತ್, ಹರೀಶ್, ಮಹೇಂದ್ರ, ರೂಹಿ, ಗೌರಿ ಇದ್ದರು.
ಸಂಗೀತಾ ಶಿಕ್ಷಕಿ ರತ್ನಾವತಿ ಪ್ರಾರ್ಥಿಸಿದರು.
ಜಿ.ಚರಣ್ ನಿರೂಪಿಸಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳ ನುರಿತ ಕುಶಲ ಕರ್ಮಿಗಳನ್ನು ಗೌರವಿಸಲಾಯಿತು.
Back to top button
error: Content is protected !!