ಕ್ರೈಂ

MDMA ಮಾರಾಟ: ಆರೋಪಿಗಳ ಬಂಧನ

ಕುಶಾಲನಗರ, ಅ 31:

ದಿನಾಂಕ 30-10-2026 ರಂದು ಮಡಿಕೇರಿ ನಗರದ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಮೈದಾನದಲ್ಲಿ ಮಡಿಕೇರಿ ನಗರದ ನಿವಾಸಿಗಳಾದ ರುಹೇಜ್, ಮೊಹಮ್ಮದ್ ಶಾಕೀಬ್ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾ ಸಂಖ್ಯೆ ಕೆ.ಎ 12ಬಿ 5552 ರ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ತಮ್ಮ ವಶದಲ್ಲಿ MDMA ಮಾದಕ ಪದಾರ್ಥವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಮಾಹಿತಿ ಸಂಗ್ರಹಿಸಿ ಗುಪ್ತ ಕರ್ತವ್ಯದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ 81/2026 ಕಲಂ 22 ಎನ್‌ಡಿ.ಪಿ.ಎಸ್ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ನಂತರ ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿಯವರೊಂದಿಗೆ ಹೋಗಿ ದಾಳಿ ನಡೆಸಿ ಆರೋಪಿಗಳಿಂದ MDMA ಮಾದಕ ಪದಾರ್ಥವನ್ನು ವಶಪಡಿಸಿಕೊಂಡು ಹಾಗೂ ಆರೋಪಿಗಳಾದ ರುಹೇಜ್, ಮೊಹಮ್ಮದ್ ಶಾಕೀಬ್ ರವರನ್ನು ವಶಕ್ಕೆ ಪಡೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳಿಂದ ರೂ 4,04,000/- ಮೌಲ್ಯದ 11 ಗ್ರಾಂ MDMA ಮಾದಕ ಪದಾರ್ಥ, 5 ಮೊಬೈಲ್, 1-ಆಟೋ ರಿಕ್ಷಾ, 1-ತೂಕದ ಯಂತ್ರ ಹಾಗೂ 1-ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ

11. ರುಹೇಜ್ ಶೇಖ್ ತಂದೆ ಶೇಖ್–ತಾಹಿರ್- ಪ್ರಾಯ–29- ವರ್ಷ- ಆಟೋ- ಚಾಲಕ ಕೆಲಸ, ವಾಸ

— ಗೌಳಿಬೀದಿ, ಮಡಿಕೇರಿ ನಗರ —

2. ಮಹಮ್ಮದ್ ಶಾಕೀಜ್ ತಂದೆ ಮನ್ಸೂರ್ ಎಂ.ಎ ಪ್ರಾಯ 19 ವರ್ಷ ಬಿಬಿಎ ವಿದ್ಯಾರ್ಥಿ, ವಾಸ —-ಜಾಮೀಯ ಮಸೀದಿಗೆ ಸೇರಿದ-ಬೆಂಜ್-ಆಟೋ-ಪಾರ್ಟ್ಸ್-ನಲ್ಲಿ, ಮಾರ್ಕೆಟ್ ಬಳಿ, ಮಡಿಕೇರಿ ನಗರ—

Related Articles

Leave a Reply

Your email address will not be published. Required fields are marked *

Back to top button
error: Content is protected !!