ಪ್ರಕಟಣೆ

ಆಟೋ ಚಾಲಕರ ನ್ಯಾಯಯುತ ಹೋರಾಟಕ್ಕೆ ಕರವೇ ಸಂಪೂರ್ಣ ಬೆಂಬಲ

 ಮಡಿಕೇರಿ ನಗರದಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿಗಳ ವಿರುದ್ಧ ಅಕ್ಟೋಬರ್ 30ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ನ್ಯಾಯಯುತ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.

ಸಾಲ ಮಾಡಿ ಆಟೋ ಖರೀದಿಸಿ, ತೆರಿಗೆ, ವಿಮೆ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಕುಟುಂಬ ನಿರ್ವಹಣೆಗಾಗಿ ಹಗಲಿರುಳು ದುಡಿಯುತ್ತಿರುವ ಆಟೋ ಚಾಲಕರ ಬದುಕಿಗೆ ಸಂಕಷ್ಟ ಎದುರಾಗಬಾರದು. ರಾಪಿಡೋ ಬೈಕ್ ಟ್ಯಾಕ್ಸಿಗಳ ಪರವಾನಗಿ ಮತ್ತು ಕಾನೂನುಬದ್ಧತೆಯ ಕುರಿತು ಸರ್ಕಾರ ಹಾಗೂ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಬೇಕು. ಎಲ್ಲಾ ಸಾರಿಗೆ ಸೇವೆಗಳಿಗೂ ಸಮಾನ ನಿಯಮಗಳನ್ನು ಜಾರಿಗೊಳಿಸಿ, ಆಟೋ ಚಾಲಕರ ನ್ಯಾಯಯುತ ಬೇಡಿಕೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಕರವೇ ಆಗ್ರಹಿಸುತ್ತದೆ.

ಆಟೋ ಮಾಲೀಕರು, ಚಾಲಕರು ಹಾಗೂ ಎಲ್ಲಾ ಶ್ರಮಜೀವಿ ಬಂಧುಗಳು ಒಗ್ಗಟ್ಟಿನಿಂದ ನಿಂತು ಈ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತದೆ. ನಮ್ಮ ಹಕ್ಕು ಮತ್ತು ಬದುಕಿನ ರಕ್ಷಣೆಗಾಗಿ ಶಾಂತಿಯುತವಾಗಿ, ಒಗ್ಗಟ್ಟಿನಿಂದ ಹೋರಾಡೋಣ. ಚಾಲಕರ ನ್ಯಾಯಕ್ಕಾಗಿ ಧ್ವನಿ ಎತ್ತೋಣ!

ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ, ನಿಮ್ಮ ನ್ಯಾಯಕ್ಕಾಗಿ ನಮ್ಮ ಹೋರಾಟ!

ಆನಂದ್ ಕನ್ನಡಿಗ
ಅಧ್ಯಕ್ಷರು
ಮಡಿಕೇರಿ ವಿಧಾನ ಸಭಾ ಕ್ಷೇತ್ರ
ಕರ್ನಾಟಕ ರಕ್ಷಣಾ ವೇದಿಕೆ
(ಪ್ರವೀಣ್ ಕುಮಾರ್ ಶೆಟ್ಟಿ ಬಣ), ಕೊಡಗು ಜಿಲ್ಲೆ

Related Articles

Leave a Reply

Your email address will not be published. Required fields are marked *

Back to top button
error: Content is protected !!