ಕಾರ್ಯಕ್ರಮ

ನವೆಂಬರ್ ೧ ರಿಂದ ೩ ರವರೆಗೆ ವಾರಣಾಸಿಯಲ್ಲಿ ನಡೆಯಲಿರುವ ೭ನೇ ನ್ಯಾಷನಲ್ ಜೂನಿಯರ್ ಹಾಗೂ ಸೀನಿಯರ್ ಸೆಸ್ಟೋಬಾಲ್ ಫೆಡರೇಶನ್ ಕಪ್

ಕುಶಾಲನಗರ, ಅ 24: ನವೆಂಬರ್ ೧ ರಿಂದ ೩ ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಲಿರುವ ೭ ನೇ ನ್ಯಾಷನಲ್ ಜೂನಿಯರ್ ಹಾಗೂ ಸೀನಿಯರ್ ಸೆಸ್ಟೋಬಾಲ್ ಫೆಡರೇಶನ್ ಕಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಆಟಗಾರರ ಅಭ್ಯಾಸ ಶಿಬಿರ ಹಾಗೂ ಜರ್ಸಿ ಬಿಡುಗಡೆ ಕಾರ್ಯಕ್ರಮ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ನಂತರ‌ ಮಾತನಾಡಿದ ಅವರು, ಕ್ರೀಡಾಪಟುಗಳು ಅತ್ಯಂತ ಸ್ಪೂರ್ತಿಯಿಂದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಹಾಗೂ ಶಿಬಿರದ ಸಂಚಾಲಕ ಎಸ್.ಆದಂ, ಈ ಕ್ರೀಡೆಯು ೧೮೯೭ ರಲ್ಲಿ ಅರ್ಜೆಂಟೀನಾದಲ್ಲಿ ಕ್ರೀಡೆ ಪ್ರಾರಂಭವಾಗಿದ್ದು, ಪ್ರಸ್ತುಸ ೮೦ ರಾಷ್ಟ್ರಗಳಲ್ಲಿ ಆಟ ಚಾಲ್ತಿಯಲ್ಲಿದೆ. ಒಲಂಪಿಕ್ ನಲ್ಲಿ ಮಾನ್ಯತೆ ಪಡೆಯಲು ಕನಿಷ್ಠ ನೂರು ರಾಷ್ಟ್ರಗಳಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿರಬೇಕು. ಭಾರತದಲ್ಲಿ ೨೦೧೮ ರಲ್ಲಿ ಪರಿಚಯವಾಗಿದ್ದು, ೨೦೨೩ ರಲ್ಲಿ ವಿಶ್ವಕಪ್ ಬೆಂಗಳೂರಿನಲ್ಲಿ ನಡೆದಿತ್ತು. ಈ ಪಂದ್ಯಾವಳಿಯಲ್ಲಿ ಭಾರತ ಬೆಳ್ಳಿ ಪದಕ ಪಡೆದಿತ್ತು. ಈ ತಂಡವನ್ನು ನಾಯಕಿಯಾಗಿ ನಂಜರಾಯಪಟ್ಟಣದ ನಂದಿನಿ ಅವರು ಮುನ್ನಡೆಸಿದ್ದರು. ಇದು ನಮ್ಮ‌ ಕೊಡಗಿಗೆ ಹೆಮ್ಮೆಯ ಸಂಗತಿ ಎಂದ ಅವರು, ಪ್ರಸ್ತುತ ಕರ್ನಾಟಕ ತಂಡದಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಕೊಡಗಿನ ೧೦ ಕ್ರೀಡಾಪಟುಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ರೀಡೆಗೆ ಸರ್ಕಾರದಿಂದ ಪ್ರೋತ್ಸಾಹ ನೀಡಬೇಕು. ಇದರಿಂದ ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.

ಈ ಸಂದರ್ಭ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರ ಸ್ವಾಮಿ, ಜಿ.ಪಂ ಮಾಜಿ ಸದಸ್ಯೆ ಸುನಿತಾ, ಕೊಡಗು ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುಬೀನ.ಎಂ.ಎ,
ಕಾರ್ಯನಿರತ
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಕಾಂಗ್ರೆಸ್ ಮುಖಂಡರಾದ ಇರ್ಫಾನ್, ಅಜೀಜ್, ಉದ್ಯಮಿ ಭಾಷಾ, ಶಾಸಕರ ಮಾಧ್ಯಮ ಮುಖ್ಯಸ್ಥ ಅಬ್ದುಲ್ ರಜಾಕ್.ಕೆ.ಎ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!