ಸಭೆ

ಸಿದ್ದಲಿಂಗಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ‌ ಬಣದ ಸಭೆ

ಕುಶಾಲನಗರ, ಅ 17: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ‌ ಬಣದ ಸಭೆ ಸಿದ್ದಲಿಂಗಪುರದ ಸರಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಸೇನೆಯ ರಾಜ್ಯಾಧ್ಯಕ್ಷ ವಾಸುದೇವ‌ ಮೇಟಿ ಅವರು ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಿದ್ದಲಿಂಗಪುರ, ಅರಿಸಿನಗುಪ್ಪೆ, ಅಳಿಲುಗುಪ್ಪೆ, ಬಸಿರುಗುಪ್ಪೆ ಗ್ರಾಮದ ರೈತರು ಪ್ರಸಕ್ತ ರೈತಾಪಿ ವರ್ಗ, ಬೆಳೆಗಾರರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದರು.

ಸಂಘದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಜೆ.ಶರತ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ರೈತರಿಂದ ಮಾತ್ರ ಸಾಧ್ಯ. ತಾವು ಪ್ರತಿನಿಧಿಸುವ ಪಕ್ಷವನ್ನು ಬದಿಗೊತ್ತಿ ಒಗ್ಗೂಡಿದಾಗ ಮಾತ್ರ ನಮಗೆ ಪರಿಹಾರ ಲಭಿಸುತ್ತದೆ. ತಳಮಟ್ಟದಲ್ಲಿ ನಮ್ಮ‌ ಅಳಲು ಯಾರಿಗೂ ಅರಿವಾಗುವುದಿಲ್ಲ. ಈ ನಿಟ್ಟಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಶಕ್ತಿ ಪ್ರದರ್ಶನದೊಂದಿಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ದಿನ ನಿಗದಿ ಮಾಡಲಾಗುತ್ತದೆ ಎಂದರು.
ಗ್ರಾಮದ
ಮುಖಂಡರೂ ಆದ ಪ್ರಗತಿಪರ ಕೃಷಿಕ
ನಾಪಂಡ ಮುತ್ತಪ್ಪ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತರು ಪ್ರಮುಖವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ನಲುಗಿದ್ದಾರೆ. ಇದರೊಂದಿಗೆ ಸಿ & ಡಿ ಭೂತ ರೈತರನ್ನು ಕಾಡುತ್ತಿದ್ದು
ಈ ಭಾಗದ 4 ಗ್ರಾಮಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೈತರು ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದರು. ಈ ಭಾಗದ ರೈತರ ಸಮಿತಿ ರಚಿಸುವ‌ ಮೂಲಕ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ರೈತ ಮುಖಂಡ
ಚಕ್ರವರ್ತಿ, ದೇವರಾಜು‌ ಮಾತನಾಡಿದರು.

4 ಗ್ರಾಮಗಳ ರೈತರನ್ನು ಒಳಗೊಂಡ ರೈತ ಸಂಘದ ನೂತನ ಸಮಿತಿ ರಚಿಸಿ ಆಯ್ಕೆಯಾದ ಪದಾಧಿಕಾರಿಗಳನ್ನು ಸಂಘದ ರಾಜ್ಯ ಪ್ರತಿನಿಧಿಗಳು ಹಸಿರು ಶಾಲು ಹೊದಿಸುವ ಮೂಲಕ ಗೌರವಿಸಿ ಬರಮಾಡಿಕೊಂಡರು.

ಇದೇ ಸಂದರ್ಭ
ಪಿ.ಡಿ.ರವಿ ಅವರನ್ನು ಸಂಘದ ಜಿಲ್ಲಾ ಸಂಚಾಲಕರಾಗಿ ಘೋಷಿಸಲಾಯಿತು.

ವೇದಿಕೆಯಲ್ಲಿ ರೈತ ಸಂಘದ ರಾಜ್ಯ
ಉಪಾಧ್ಯಕ್ಷ ಡಾ.ಗುರುಪ್ರಸಾದ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮಾಡ್ರಳ್ಳಿ ಮಹದೇವ, ಬೆಳಗಾವಿ ಜಿಲ್ಲಾಧ್ಯಕ್ಷ ಗೋಪಾಲ್, ಕೊಡಗು ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ್, ರಾಜ್ಯ ಸಂಚಾಲಕ ಡಾ.ಅರುಣ್ ಕುಮಾರ್,
ಗ್ರಾಮದ ಪ್ರಗತಿಪರ ಕೃಷಿಕರಾದ ಚಕ್ರವರ್ತಿ, ರಾಮಣ್ಣ ಎ.ಎಸ್, ಬೇಬಿ ಎಂ.ಟಿ, ಕೆ.ಬಿ.ದೇವರಾಜ್, ಎಸ್.ಜೆ.ಗೋವಿಂದಪ್ಪ, ಕುಶಾಲಪ್ಪ, ಬೆಳ್ಯಪ್ಪ, ಶಾಂತಿ, ಬೋಪಯ್ಯ, ಯೋಗಿಣಿ ಬೆಳ್ಯಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!