ಕುಶಾಲನಗರ, ಅ 14: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಂದ ಬಿರುಸಿನ ಮತಯಾಚನೆ ನಡೆಯುತ್ತಿದೆ.
ಅಕ್ಟೋಬರ್ 24 ರ ಶನಿವಾರ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ
ಸಂಘದ ಹಿಂದಿನ ಸಾಲಿನ ಅಧ್ಯಕ್ಷ ಎಂ.ಕೆ.ದಿನೇಶ್ ನೇತೃತ್ವದ ತಂಡದ ಸದಸ್ಯರು ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಜನ ಮೆಚ್ಚುವಂತೆ ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ಮೆಚ್ಚಿ ಮತ ನೀಡಿ ಎಂದು ಮಾಜಿ ಅಧ್ಯಕ್ಷ ಎಂ.ಕೆ.ದಿನೇಶ್ ಮನವಿ ಮಾಡಿದರು.
ಸಂಘವನ್ನು 2016 ರಲ್ಲಿ ಪ್ರಾರಂಭಿಸಿದ್ದು, ನಮ್ಮ ಅವಧಿಯಲ್ಲಿ ಸುಮಾರು 4 ಕೋಟಿ ವ್ಯವಹಾರ ನಡೆಸಿದ್ದೇವೆ. ರಿಕವರಿ ಉತ್ತಮವಾಗಿದೆ. ಸ್ವಂತ ನಿವೇಶನದಲ್ಲಿ ಕಚೇರಿ ನಿರ್ಮಿಸಿದ್ದೇವೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಜಿಲ್ಲೆಯ ಬೆಸ್ಟ್ ಬ್ಯಾಂಕ್ ಎಂದು ಎರಡು ಬಾರಿ ಪ್ರಶಸ್ತಿ ಪಡೆದಿದ್ದೇವೆ. ಆದ್ದರಿಂದ ಮತದಾರರು ನಮ್ಮ ತಂಡಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಕೋರಿದರು.
ಈ ಸಂದರ್ಭ ತಂಡದ ಅಭ್ಯರ್ಥಿಗಳಾದ ನಾಗೇಶ್ ಸಿ.ವಿ, ಜಗದೀಶ್ ಜಿ.ಬಿ, ಹೇಮಕುಮಾರ್ ಕೆ.ಕೆ, ಜೈರಾಜ್ ವಿ.ಬಿ, ನಂಜುಂಡ ಎಂ.ಆರ್, ಮಂಜುನಾಥ್ ಕೆ.ಎನ್, ರಮೇಶ್ ಎ.ಎನ್, ರಮ್ಯ ಹೆಚ್.ವಿ ಮತ್ತು ಮಲ್ಲಿಗೆ ಕೆ.ಟಿ. ಇದ್ದರು
Back to top button
error: Content is protected !!