ಕೂಡಿಗೆ, ಅ. 10: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನಯ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರು ಸ್ವತಃ ಎರಡು ಲಕ್ಷ ವ್ಯಯಿಸಿ ನೂತನ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.
ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನಯ್ಯ ದೇವಾಲಯಕ್ಕೆ ಜಿಲ್ಲೆ ಸೇರಿದಂತೆ ಮೈಸೂರು, ಹಾಸನ ಚಾಮರಾಜನಗರ ಜಿಲ್ಲೆಯಿಂದ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬರುವ ಅಪಾರ ಭಕ್ತರಿಗೆ ಸುಸಜ್ಜಿತ ಶೌಚಾಲಯ ಕೊರತೆ ಮನಗಂಡ ಅವರು ಭಕ್ತರಿಗೆ ಅನಾನುಕೂಲ ತಪ್ಪಿಸಲು ಪುರುಷ ಮತ್ತು ಮಹಿಳಯರಿಗೆ ಪ್ರತ್ಯೇಕ ಶೌಚಾಲಯದ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಇದರ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ದೇವಸ್ಥಾನ ಪ್ರಧಾನ ಅರ್ಚಕ ರಾದ ಕುಮಾರ್, ಕೃಷ್ಣಪ್ಪ, ಅಪ್ಪಿಸ್ವಾಮಿ, ಸೇರಿದಂತೆ ನೂತನ ಭಕ್ತರು, ಗ್ರಾಮಸ್ಥರು ,ಸಾರ್ವಜನಿಕರು ಇದ್ದರು.
Back to top button
error: Content is protected !!