ಕುಶಾಲನಗರ, ಅ 08: ರಾಷ್ಟ್ರೀಯ ಹೆದ್ದಾರಿ 275 ರ ಕುಶಾಲನಗರ-ಸುಂಡಿಕೊಪ್ಪ ನಡುವಿನ ಆನೆಕಾಡಿನಲ್ಲಿ ಹಂಪ್ಸ್ ನಿರ್ಮಾಣ ಮಾಡಲಾಗಿದೆ. ಅತಿ ವೇಗದಿಂದ ಉಂಟಾಗುವ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಒಟ್ಟು 6 ಹಂಪ್ಸ್ ನಿರ್ಮಿಸಲಾಗಿದೆ. ಆದರೆ ಈ ಹಂಪ್ಸ್ ಗಳ ಬಗ್ಗೆ ಅರಿವಿಲ್ಲದೆ ವಾಹನಗಳು ಮತ್ತೆ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಎಂದಿನಂತೆ ಸಮತಟ್ಟು ಹೆದ್ದಾರಿಯಲ್ಲಿ ಒಂದೇ ವೇಗದಲ್ಲಿ ಆಗಮಿಸುವ ವಾಹನಗಳು ಏಕಾಏಕಿ ಹಂಪ್ಸ್ ಕಂಡು ವಾಹನಗಳನ್ನು ಏಕಾಏಕಿ ನಿಯಂತ್ರಿಸಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಇದು ಚಾಲಕರು, ಸವಾರರನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದು ಈ ಮಾರ್ಗದಲ್ಲಿ ಜಾಗರೂಕರಾಗಿ ಚಲಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Back to top button
error: Content is protected !!