ಅರಣ್ಯ ವನ್ಯಜೀವಿ

ಅಕ್ರಮ ಶ್ರೀಗಂಧ ಮರ ಸಾಗಾಟ

ಸಿದ್ದಾಪುರ, ಸೆ 21: ನೆಲ್ಲಿ ಹುದಿಕೇರಿ ಗ್ರಾಮದ ಕೆ ಎಂ ಪ್ರಕಾಶ್ ರವರ ತೋಟದಿಂದ ಅಕ್ರಮವಾಗಿ ಮೂರು ಗಂಧದ ಮರಗಳನ್ನು ಕಡಿದು ಸಾಗಿಸಿ ಚೆನ್ನೈನಕೋಟೆ ಗ್ರಾಮದ ಜಲಕಟ್ಟೆ ಎಂಬಲ್ಲಿ ಚೇಗನ್ನು ಬೇರ್ಪಡಿಸುತ್ತಿದ್ದ ಮಾಹಿತಿ ಬಂದ ಮೇರೆಗೆ ವೀರಾಜ ಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನಿತಾ ಚೌಹಾನ್ ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ರಾಕೇಶ್ ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ ಟಿ ನೇತೃತ್ವದ ತಂಡ ದಾಳಿ ಮಾಡಿ ಚೆನ್ನಯ್ಯನ ಕೋಟೆ ಗ್ರಾಮದ ಕೋಟೆ ಪೈಸಾರಿ ನಿವಾಸಿ ಚಂದ್ರ ಎಂಎಂ ಚೆನ್ನಯ್ಯನ ಕೋಟೆ, ಜಲ್ಲಕಟ್ಟೆ ನಿವಾಸಿ ಉಮೇಶ್ ಹೆಚ್ ಪಿ ಇವರನ್ನು ಬಂಧಿಸಿ ಸುಮಾರು 20 ಕೆಜಿ ಹಸಿ ಗಂಧದ ಕೊರಡು 15 ಕೆಜಿ ಹಸಿ ಗಂಧದ ತುಂಡುಗಳು ಸುಮಾರು 20 ಕೆಜಿ ಗಂಧದ ಬಿಳಿ ಮರದ ಚಕ್ಕೆಗಳು ಸರ್ಕಾರ ಪರಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ವಹಿಸಿರುತ್ತಾರೆ. ಪ್ರಕರಣದಲ್ಲಿ ಮೂರು ಜನ ಆರೋಪಿಗಳು ತಲೆಮರಿಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ ಕಾರ್ಯಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ರಾಜೇಶ್

ಆರ್ ಆರ್ ಟಿ ತಂಡದ ರೋಷನ್, ಪ್ರದೀಪ, ಪ್ರವೀಣ, ಮಂಜು, ನಿತಿನ್ ಚಾಲಕರಾದ ಸಂಜು ಮತ್ತು ಪ್ರಮೋದ್ ಭಾಗವಹಿಸಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!