ಧಾರ್ಮಿಕ

ಗುಡ್ಡೆಹೊಸೂರಿನಲ್ಲಿ ಅದ್ದೂರಿ ಗೌರಿ ಗಣೇಶ ವಿಸರ್ಜನೆ

ಗುಡ್ಡೆ ಹೊಸೂರು, ಸೆ 21: ಗುಡ್ಡೆಹೊಸೂರು ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 32ನೇ ವರ್ಷದ ಗೌರಿ ಗಣೇಶ ಉತ್ಸವವು ಅದ್ದೂರಿಯಾಗಿ ನೆರವೇರಿತು. ಇಲ್ಲಿನ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ ಉತ್ಸವಮೂರ್ತಿಗೆ. ಐದು ದಿನಗಳ ಕಾಲ ವಿವಿಧ ಪೂಜೆಗಳನ್ನು ನೆರವೇರಿಸಿ. ದಿನಾಂಕ 20 ರಂದು ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವುದರ ಮೂಲಕ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ವಿದ್ಯುತ್ ಅಲಂಕೃತಗೊಂಡ ಭವ್ಯವಾದ ಮಂಟಪದಲ್ಲಿ. ರಾಷ್ಟ್ರೀಯ ಹೆದ್ದಾರಿ ಬಳಿಯ ವಿವಿಧ ರಸ್ತೆಗಳಲ್ಲಿ ನಡೆದ ಶೋಭಾ ಯಾತ್ರೆಯು ಜನಮನಗಳಲ್ಲಿ ಸಂತೋಷವನ್ನುಂಟು ಮಾಡಿ ಸಾರ್ವಜನಿಕರಿಗೆ ಮೆಚ್ಚುಗೆಗೆ ನಾಂದಿಯಾಯಿತು. ಸುಮಾರು 2 ಗಂಟೆಗಳ ಕಾಲ ಗುಡ್ಡೆಯುಸೂರಿನ ಡಾಕ್ಟರ್ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿಯವರ ವೃತ್ತದ ಬಳಿ ಸುಮಾರು ಸಾವಿರಕ್ಕಿಂತ ಹೆಚ್ಚು ಯುವಕರ ತಂಡ ನಡೆಯುತ್ತಿದ್ದ ದೃಶ್ಯ ರೋಚಕವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಬಳಿ. ಗುಡ್ಡೆ ಹೊಸೂರಿನ ವೃತ್ತವು ಮದುವೆ ಮನೆ ತರದ ರೀತಿ ಸಿಂಗಾರಗೊಂಡು ವಿದ್ಯುತ್ ದೀಪಗಳಿಂದ ಜಗಜಗಗೊಳಿಸುತ್ತಿತ್ತು. ಈ ಸಂದರ್ಭ ಕುಶಾಲ್ನಗರದ ಗ್ರಾಮಾಂತರ ಠಾಣೆ ವತಿಯಿಂದ. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಮೆರವಣಿಗೆಯನ್ನು ಉತ್ತಮ ರೀತಿಯಲ್ಲಿ ಸಾಗಿ 10 ಗಂಟೆಯ ನಂತರ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಅಲ್ಲಿನ ತೂಗು ಸೇತುವೆ ಬಳಿ ವಿಸರ್ಜಿಸಲಾಯಿತು. ಈ ಮೆರವಣಿಗೆಯಲ್ಲಿ ಗುಡ್ಡೆ ಹೊಸೂರು ಸುತ್ತಮುತ್ತ ಸೇರಿದಂತೆ. ಹಲವು ಗ್ರಾಮದ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯು ಹನುಮ ಜಯಂತಿ ಸಂದರ್ಭ ಈ ಭಾಗದಲ್ಲಿ ನಡೆಯುವ ಮೆರವಣಿಗೆ ರೀತಿ ಜನಮನದಲ್ಲಿ ಕಂಡು ಬಂತು. ಗುಡ್ಡೆ ಹೊಸೂರಿಗೆ ಮೆರವಣಿಗೆ ಆಗಮಿಸಿದ ಸಂದರ್ಭ ಧರ್ಮ ಜಾತಿಗಳ ಭೇದಭಾವ ಮರೆತು. ಸಾವಿರಾರು ಮಂದಿ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!