ಕುಶಾಲನಗರ, ಸೆ 15: ಕೊಡಗು ಜಿಲ್ಲೆಯ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದಿಂದ ಜಿಪಂ ಮಾಜಿ ಸದಸ್ಯರೂ ಆದ ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಅಧ್ಯಕ್ಷ
ಅಬ್ದುಲ್ ರಜಾಕ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಹಾಯಕ ಬಡವರ, ಶೋಷಿತರ ಹಾಗೂ ದುರ್ಬಲರ ಧ್ವನಿಯಾಗಿ, ಸುದೀರ್ಘ 35 ವರ್ಷಗಳ ಕಳಂಕರಹಿತ ಸಾರ್ವಜನಿಕ ಬದುಕನ್ನು ಜನಸೇವೆಗೆ ಸಮರ್ಪಿಸಿಕೊಂಡು, ಅನ್ಯಾಯ, ಅಕ್ರಮ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಎದೆಗಾರಿಕೆಯಿಂದ ಹೋರಾಟ ನಡೆಸುತ್ತಿರುವ ವಿ.ಪಿ. ಶಶಿಧರ್ ಅವರಿಗೆ ಪ್ರೀತಿ ಹಾಗೂ ಅಭಿಮಾನಪೂರ್ವಕವಾಗಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಸರಕಾರಿ ಭೂಮಿ ಉಳಿವಿಗೆ ಹೋರಾಟ ಸೇರಿದಂತೆ
ಕುಶಾಲನಗರ ಕಾವೇರಿ ತಾಲ್ಲೂಕಿನ ಕನಸನ್ನು ಸಾಕಾರಗೊಳಿಸುವಲ್ಲಿ ಅವಿರತ ಶ್ರಮಿಸಿದ, ರಾಜಿಯಿಲ್ಲದ ಜನಪರ ಹೋರಾಟಗಳನ್ನು ರೂಪಿಸಿದ ವಿ.ಪಿ. ಶಶಿಧರ್ ಅವರ ಸೇವೆಯನ್ನು ಗುರುತಿಸಿ ಇದೇ ಸೆಪ್ಟೆಂಬರ್ 27ರ ಭಾನುವಾರ ಸಂಜೆ 4 ಗಂಟೆಗೆ ಕುಶಾಲನಗರದ ತಾವರೆಕೆರೆಯ ಎಸ್.ಎಲ್.ಎನ್ ಗ್ರ್ಯಾಂಡ್ ಕನ್ವೆನ್ಷನ್ ಹಾಲ್ನಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4 ಗಂಟೆಗೆ ಪ್ರಚಲಿತ ಚುನಾವಣಾ ರಾಜಕಾರಣ ಹಾಗೂ ಪ್ರಜಾಪ್ರಭುತ್ವ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ.
5 ಗಂಟೆಗೆ ಆರಂಭವಾಗುವ ಸನ್ಮಾನ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ.
ಅರಮೇರಿ ಮಠದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಸೇರಿದಂತೆ ಮಾಜಿ ಮಂತ್ರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ನಂತರ ಔತಣಕೂಟ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ವಿ.ಎಸ್. ಆನಂದ್ ಕುಮಾರ್, ಕೆ.ಎಸ್. ಕೃಷ್ಣೇಗೌಡ, ಬಿ.ಎಸ್ ಚಂದನ್, ವಿ.ಜೆ. ನವೀನ್, ಹೆಚ್.ಸಿ ಮೂರ್ತಿ, ನವೀದ್ ಖಾನ್, ಸುಂಟಿಕೊಪ್ಪದ ರಫೀಕ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!