ಸಭೆ

ಕುಶಾಲನಗರ ಸ.ಮಾ. ಪ್ರಾ. ಶಾಲಾ ಶತಮಾನೋತ್ಸವ ಆಚರಣೆ ಮತ್ತು ಸ್ಮಾರಕ ಭವನ ನಿರ್ಮಾಣ ಸಂಬಂಧಿಸಿದ ಮಾಹಿತಿ ಒಳಗೊಂಡ ಕರಪತ್ರ ಬಿಡುಗಡೆ

ಕರಪತ್ರ ಬಿಡುಗಡೆ ಸಂದರ್ಭ

ಕುಶಾಲನಗರ,ಸೆ 05: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಮತ್ತು ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣ ಸಂಬಂಧ ಮಾಹಿತಿಗಳನ್ನು ಒಳಗೊಂಡ ಕರಪತ್ರ ಬಿಡುಗಡೆಗೊಳಿಸಲಾಯಿತು.

ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಎಂ ಎಚ್ ನಜೀರ್ ಅಹಮದ್ ಅವರು ಬಿಡುಗಡೆಗೊಳಿಸಿ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಮಾತನಾಡಿ ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣಕ್ಕೆ ಅಗತ್ಯ ಇರುವ ಆರ್ಥಿಕ ಕ್ರೋಡೀಕರಣ ಸೇರಿದಂತೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಸಮಿತಿಯ ಉಪಾಧ್ಯಕ್ಷರಾದ ಟಿ ಆರ್ ಶರವಣಕುಮಾರ್ ಮಾತನಾಡಿದರು.
ಸಮಿತಿಯ ಸಹ ಕಾರ್ಯದರ್ಶಿಗಳಾದ ಕೆ ಎಸ್ ರಾಜಶೇಖರ್, ವಿ ಎಸ್ ಆನಂದ್ ಕುಮಾರ್, ಸಂಘಟನಾ ಕಾರ್ಯದರ್ಶಿ, ವಿಜಯಕುಮಾರ್, ಜಿ ವಿ ರವಿಕುಮಾರ್ ಮತ್ತು ನಿರ್ದೇಶಕರು ಶಾಲಾ ಶಿಕ್ಷಕರು ಶಿಕ್ಷಕರು ಇದ್ದರು.
ಕಾರ್ಯದರ್ಶಿ ಎಂ ಇ. ಮೊಹಿದ್ದೀನ್ ಸ್ವಾಗತಿಸಿ ಖಜಾಂಚಿ ಎಸ್ ಕೆ ಸತೀಶ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!