ಕುಶಾಲನಗರ, ಸೆ 02: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರದ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತರ ಬೇಡಿಕೆಗೆ ಸೂಕ್ತ ಸ್ಪಂದನೆ ಲಭಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ತಿಳಿಸಿದರು.
ಸಮಿತಿ ಸದಸ್ಯರ ಸಭೆ ಬಳಿಕ ಮಾತನಾಡಿದ ಅವರು, ಹಕ್ಕುಪತ್ರಕ್ಕೆ ಬೇಡಿಕೆಯಿರಿಸಿ ಕಳೆದ 6 ತಿಂಗಳಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ವಿವಿಧ ಹಂತಗಳಲ್ಲಿ ಶಾಸಕರಾದಿಯಾಗಿ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡುಮಂಗಳೂರು ಗ್ರಾಪಂ ವತಿಯಿಂದ ಸೂಕ್ತ ದಾಖಲೆ ಒದಗಿಸಲು ಕೋರಿ ನೋಟಿಸ್ ನೀಡಲಾಗಿದೆ. ನಮ್ಮ ಹೋರಾಟ ಅಧಿಕಾರಿಗಳ ಗಮನ ಸೆಳೆದಿದೆ. ಹೊರದಾಗಿ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಕೋರಿ ಕೂಡುಮಂಗಳೂರು ಗ್ರಾಪಂ ನೂತನ ಪಿಡಿಒ ಅವರು ಪತ್ರ ವ್ಯವಹಾರ ನಡೆಸಿರುವುದು ಹಕ್ಕುಪತ್ರ ವಂಚಿತರಲ್ಲಿ ಆಶಾಭಾವನೆ ಮೂಡಿಸಿದೆ. ಈ ನಿಟ್ಟಿನಲ್ಲಿ ನಮ್ಮ ಸಮಿತಿವರಿಗೆ ಅಗತ್ಯ ತಿಳುವಳಿಕೆ ನೀಡಿ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆ ಪತ್ರ ಸಂಗ್ರಹಿಸಿ ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳು ನಮಗೆ
ಶೀಘ್ರದಲ್ಲೇ
ಹಕ್ಕುಪತ್ರ ವಿತರಿಸಿ ಅಗತ್ಯ ಮೂಲಸೌಲಭ್ಯಗಳನ್ನು ಕೂಡ ಒದಗಿಸಿಕೊಡುವಂತೆ ನಿವಾಸಿ ರಶಿಕಲಾ ಮನವಿ ಮಾಡಿದರು.
ಡಿಎಸ್ಎಸ್ ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸೌಮ್ಯ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಂಗಾಧರ, ತಾಲೂಕು ಅಧ್ಯಕ್ಷೆ ಮಂಜುಳಾ ಕುಚೇಲ್ ಮತ್ತಿತರರು ಇದ್ದರು.
Back to top button
error: Content is protected !!