ಕುಶಾಲನಗರ, ಸೆ 01: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕೊಪ್ಪಲು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಮಮತ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಸಂಘದ ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಲು ಮತ್ತು ಸಂಘದ ಏಳಿಗೆ ಸಾಧ್ಯ ಎಂದು ತಿಳಿಸಿದರು.
ಸಂಘದ ಅಧ್ಯಕ್ಷೆ ಮಮತ ಚಂದ್ರಶೇಖರ್ ಮಾತನಾಡಿ, ಸಂಘವು ಈ ಸಾಲಿನಲ್ಲಿ ರೂ 1 ಲಕ್ಷ ದಷ್ಟು ಲಾಭಾಂಶ ಗಳಿಸಿದೆ. ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಹಾಲು ಉತ್ಪಾದಕರ ಸಂಘದ ಸದಸ್ಯರುಗಳಿಗೆ ಒಕ್ಕೂಟದ ವತಿಯಿಂದ ನೀಡಲಾಗುವ ಗುಣಮಟ್ಟದ ಪಶುಅಹಾರ ಮತ್ತು ಹಸುಗಳಿಗೆ ನೀಡುವ ಚಿಕಿತ್ಸೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ವೀಣಾ, ಸಂಘದ ಉಪಾಧ್ಯಕ್ಷೆ ಜಯಶ್ರೀ ವಸಂತಕುಮಾರ್, ನಿರ್ದೇಶಕರುಗಳಾದ ರೇಣುಕಾ ಜಯಣ್ಣ, ಪವಿತ್ರ ಸುರೇಶ್, ಲತಾ ವಿಶ್ವನಾಥ್, ಕಮಲ ಸುಬ್ರಹ್ಮಣಿ, ರತ್ನ ಪುಟ್ಟರಾಜು,ರತ್ನ ಬಸವಣ್ಣ, ಜ್ಯೋತಿ ವಸಂತ ,ಲಕ್ಷ್ಮೀ ಪ್ರಕಾಶ್, ಮಂದಾಕಿನಿ ಹರೀಶ ಇದ್ದರು.
ಹಿಂದಿನ ವರ್ಷದ ವರದಿ, ಅಂದಾಜು ಬಜೆಟ್ ಮಂಜೂರು ಸೇರಿದಂತೆ ಸಂಘದ ಅಭಿವೃದ್ದಿಗೆ ಪೂರಕವಾದ ಚರ್ಚೆಗಳು ನಡೆದವು.
Back to top button
error: Content is protected !!