ಕುಶಾಲನಗರ, ಆ 22: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಳಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ರಥಬೀದಿ ನಿವಾಸಿ ಎಸ್.ಎಸ್. ನಕುಲ್ ಅವರನ್ನು ಆರ್ಯ ವೈಶ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು.
ಶ್ರೀಮತ್ ವಾಸವಿ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ನಕುಲ್ ರವರ ಧರ್ಮಪತ್ನಿ ಪೂಜಿತ ಹಾಗೂ ಪೋಷಕರು, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರುಗಳಾದ ಸತ್ಯನಾರಾಯಣ, ಬಿ.ಎಲ್. ಉದಯ್ ಕುಮಾರ್, ಖಜಾಂಚಿ ಪ್ರಶಾಂತ್, ನಿರ್ದೇಶಕರುಗಳಾದ ಅಶೋಕ್, ಕೆ.ಜಿ ಸತೀಶ್, ವೈಶಾಖ್ ಮತ್ತಿತರರು ಇದ್ದರು.
Back to top button
error: Content is protected !!