ಕುಶಾಲನಗರ, ಆ 08: 16 ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ನ್ಯಾಷನಲ್ ಚಾಂಪಿಯನ್ ಶಿಪ್-2026, ಆಗಸ್ಟ್ 12 ರಿಂದ 23 ರವರೆಗೆ ಪುಣೆಯಲ್ಲಿ ನಡೆಯಲಿದೆ. ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗುವ
ಕರ್ನಾಟಕ ತಂಡಕ್ಕೆ ಕೊಡಗಿನಿಂದ ಒಂಬತ್ತು ಬಾಲಕಿಯರು ಆಯ್ಕೆಯಾಗಿದ್ದಾರೆ.
ದಿಶಾ ನಿಡ್ಯಮಲೆ, ಚಂದನ ತಡಿಯಪ್ಪನ, ಗಗನ,
ಮನೀಷಾ ಪೊನ್ನಮ್ಮ, ಪರ್ಲಿನ್ ಪೊನ್ನಮ್ಮ, ಅಕ್ಷಿತಾ, ಪ್ರತೀಕ್ಷಾ
ಮೋನಿಕಾ ನಾಣಯ್ಯ,ಪುಣ್ಯ ಅವರು ಕೊಡಗಿನಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮೊದಲ ಬಾರಿಗೆ ತಂಡದ ನಾಯಕಿ ಆಗಿ B ತಂಡವಾಗಿರುವ ಕರ್ನಾಟಕ ತಂಡವನ್ನು A ತಂಡವಾಗಿ ಕ್ವಾಲಿಫೈ ಮಾಡುವುದು ನನ್ನ ಗುರಿ. ತಂಡದಲ್ಲಿ ಒಳ್ಳೆಯ ಆಟಗಾರ್ತಿಯರು ಇದ್ದು ಉತ್ತಮ ಆಟ ಪ್ರದರ್ಶಿಸಲಿದ್ದಾರೆ ಎಂದು ತಂಡದ ನಾಯಕಿ
ಮನೀಶ್ ಪೂವಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೆಬ್ರುವರಿಯಲ್ಲಿ ನಡೆದ ಮಧ್ಯಪ್ರದೇಶದ ಗ್ವಾಲಿಯರ್, (ಆಲ್ ಇಂಡಿಯಾ) ಪಂದ್ಯದಲ್ಲಿ ಕಂಚಿನ ಪದಕ ಗೆದ್ದಿದ್ದು ಅದೇ ರೀತಿ ಈ ಪಂದ್ಯದಲ್ಲೂ ಉತ್ತಮ ಆಟವಾಡಿ ಜೂನಿಯರ್ ಭಾರತ ತಂಡಕ್ಕೆ ಆಯ್ಕೆ ಆಗಬೇಕೆಂಬುದು ನನ್ನ ಗುರಿ ಎಂದು ತಂಡದ ಸದಸ್ಯೆ ಕುಶಾಲನಗರದ ದಿಶಾ ನಿಡ್ಯಮಲೆ ಆಶಯ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!