ಸನ್ಮಾನ

ನಿವೃತ್ತರಾಗಿ ಆಗಮಿಸಿದ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಕುಶಾಲನಗರ, ಆ 02: ಭಾರತ ಸೇನೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ‌ ನಿವೃತರಾದ ನಂಜರಾಯಪಟ್ಟಣದ ಯೋಧ ಸಿ.ಎಲ್.ತಿಲಕ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗ್ರಾಮಕ್ಕೆ ಆಗಮಿಸಿದ ಯೋಧ ತಿಲಕ್ ಅವರಿಗೆ ನಿವೃತ್ತ ಸೈನಿಕರು, ಕುಟುಂಬಸ್ಥರು‌ ಮತ್ತು ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಜಿಲ್ಲೆಗೆ ಆಗಮಿಸಿದ ತಿಲಕ್ ಅವರನ್ನು ‌ಕೊಡಗು-ಮೈಸೂರು ಗಡಿಯಲ್ಲಿ ಬರಮಾಡಿಕೊಳ್ಳಲಾಯಿತು. ಕಾವೇರಿ ಮಾತೆಗೆ ಮಾಲಾರ್ಪಣೆ‌ ಮಾಡಿದ ಯೋಧ ತಿಲಕ್ ಅವರನ್ನು ಹಾರ ತುರಾಯಿಗಳೊಂದಿಗೆ ತೆರೆದ ವಾಹನದಲ್ಲಿ ನಂಜರಾಯಪಟ್ಟಣ ಗ್ರಾಮದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ನಂಜರಾಯಪಟ್ಟಣ ಸಹಕಾರ ಸಂಘದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡರು, ಸಂಘಸಂಸ್ಥೆಯವರು ಯೋಧನಿಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಿ ದೇಶಸೇವೆಗೆ ಮತ್ತು ನಿವೃತ್ತ ಜೀವನಕ್ಕೆ ಶುಭ ಕೋರಿದರು.
ಈ ಸಂದರ್ಭ ಯೋಧನ ತಾಯಿ ರಾಧಾ
ಪತ್ನಿ ಪೂಜಿತಾ, ಸಹೋದರ ನಂಜರಾಯಪಟ್ಟಣ ಗ್ರಾಪಂ‌ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ, ಸಹೋದರಿ ಶಿಕ್ಷಕಿ ಸಿ.ಎಲ್.ಜ್ಯೋತಿ, ಅತ್ತೆ ನಡುಮನೆ ಹೇಮವತಿ, ಕುಟುಂಬ ಸದಸ್ಯರಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹರಗದ ಚೇತನ್, ಮಾಜಿ ಸೈನಿಕರುಗಳಾದ ಪಾಣತ್ತಲೆ ಸೋಮಣ್ಣ, ಜಲಾಲುದ್ದಿನ್, ಪಿ.ಕೆ.ರಾಮ, ಕೆಮ್ಮಾರನ ಗಿರೀಶ್, ಬೊಪ್ಪನ ಧನಂಜಯ, ಅಂಥೋಣಿ, ದಿನೇಶ್ ಸಿ.ಆರ್, ಹೊನ್ನಪ್ಪ, ರವಿ, ಜೇಮ್ಸ್, ಪಾರೇರ ಜಯ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!