ಕಾರ್ಯಕ್ರಮ

ಕೂಡಿಗೆ ಡೇರಿ ವತಿಯಿಂದ ಉತ್ತರಾಧಿ ಶ್ರದ್ಧಾಂಜಲಿ ಕಾರ್ಯಕ್ರಮ.

ಕೂಡಿಗೆ, ಜು. 30: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಉತ್ತರಾಧಿಕ್ರಿಯೆ ಶ್ರದ್ಧಾಂಜಲಿ ಕಾರ್ಯಕ್ರಮ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ರವರ ನೇತೃತ್ವದಲ್ಲಿ ಕೂಡಿಗೆ ಡೇರಿ ಸಭಾಂಗಣದಲ್ಲಿ ನೆರವೇರಿತು.

ಡೇರಿ ಕಛೇರಿ ಆವರಣದಲ್ಲಿ ದಿವಂಗತ ಚೆನ್ನಮ್ಮ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಕೂಡಿಗೆ ಡೇರಿಯ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ, ಕಾರ್ಮಿಕ ವೃಂದದವರು ಹಾಗೂ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು, ಡೇರಿಯ ನೂರಾರು ನಿವೃತ್ತ ನೌಕರರು ಹಾಜರಿದ್ದು ಶ್ರದ್ಧಾಂಜಲಿ ಅರ್ಪಿಸಿ ಚೆನ್ನಮ್ಮ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಕಾರ್ಯಕ್ರಮ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ವೃಯೋವೃದ್ಧರಿಗೆ ಅನ್ನಸಂರ್ತಪಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಡೇರಿಯಲ್ಲಿ ಭೋಜನದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತು.
ಈ ಸಂದರ್ಭದಲ್ಲಿ ಡೇರಿ ವ್ಯವಸ್ಥಾಪಕ ನಂದೀಶ್, ಉಪ ವ್ಯವಸ್ಥಾಪಕ ಅನಿಲ್ ಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಮಲ್ಲೇಶ್, ಕರ್ನಾಟಕ ರಾಜ್ಯ ಮಹಾಮಂಡಲ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್. ಆರ್. ಅರುಣ್ ರಾವ್, ಕೂಡಿಗೆ ಸಹಕಾರ ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ನಿರ್ದೇಶಕರುಗಳಾದ ಕೆ.ಪಿ.ರಾಜು, ಎಸ್. ಎಸ್ ಕೃಷ್ಣ, ರಾಮಚಂದ್ರ, ನಾಗರಾಜು, ಜಯಶ್ರೀ, ರಮೇಶ್, ಕುಮಾರ್, ಹಾಲು ಉತ್ಪಾದಕರ ಸಂಘಗಳ ಮೇಲ್ವಿಚಾರಕಿ ವೀಣಾ, ಜಿಲ್ಲಾ ಯೂನಿಯನ್ ‌ಸಹಕಾರ ಸಂಘದ ನಿರ್ದೇಶಕ ಎಸ್. ಆರ್ ಸುನಿಲ್ ರಾವ್ ಸೇರಿದಂತೆ ಡೇರಿಯ ವಿವಿಧ ವಿಭಾಗ ಅಧಿಕಾರಿ ವರ್ಗದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!