ಸೋಮವಾರಪೇಟೆ, ಜು 29: ಬಡವರ ಪಾಲಿಗೆ ವರವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಬೆಳಗಿನ ತಿಂಡಿ ಮದ್ಯಾಹ್ನದ ಊಟ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ಪಲಾಗುತಿದ್ದದ್ದನ್ನು ಖಂಡಿಸಿ ಅಲ್ಲಿನ ನಿರ್ವಾಹಕರಿಗೆ ಹಿಂದೆ ಹಾಗೆ ಮಾಡದಂತೆ ತಾಕಿತ್ತು ಮಾಡಲಾಗಿತ್ತು ,ಆದರೆ ಕದ್ದು ಮುಚ್ಚಿ ಹಳೆ ಚಾಳಿ ಮುಂದುವರಿಸಿದ ಬೆನ್ನಲ್ಲೇ ಸೋಮವಾರಪೇಟೆ ಕರ್ನಾಟಕ ರಕ್ಷಣಾ ವೇದಿಕೆಯ ತಂಡ ಅಲ್ಲಿನ ಅಧ್ಯಕ್ಷ ಸಂತೋಷ್ ಅವರ ನೇತ್ರತ್ವದಲ್ಲಿ ಕಾದು ಕುಳಿತು ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಪಾರ್ಸಲ್ ಕಳಿಸಲು ಸಿದ್ದವಾಗಿದ್ದಾಗ ಸಾಕ್ಷಿ ಸಮೇತ ಹಿಡಿದು ಕೆಲ ಕ್ಷಣ ಪಾರ್ಸಲ್ ಕಳಿಸಿದಂತೆ ದಿಗ್ಬಂದನ ಹಾಕಲಾಯಿತು.
ಇಲ್ಲಿನ ಇಂದಿರಾ ಕ್ಯಾಂಟೀನ್ ಪ್ರತಿದಿನ ಸರ್ಕಾರಿ ನೌಕರರಿಗೆ ಅವರ ಕಚೇರಿಗೆ ೫ರಿಂದ ೧೦ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಪಾರ್ಸಲ್ ಕಳಿಸುತ್ತಿದ್ದು, ಅಲ್ಲಿನ ಬೀದಿ ವ್ಯಾಪಾರಿಗಳು, ಬೀದಿ ಸ್ವಚ್ಛ ಮಾಡುವವರು, ಟ್ಯಾಕ್ಸಿ ಡ್ರೈವರ್ ಗಳು ಪೇಟೆಗೆ ಬ್ಯಾಂಕ್ ವ್ಯವಹಾರಕ್ಕೆ ಬಂದ ರೈತರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದರು . ಈ ಬಗ್ಗೆ ಕೆಲ ಕಾಲದ ನಂತರ ತಪ್ಪು ಒಪ್ಪಿಕೊಂಡ ಅಲ್ಲಿನ ನಿರ್ವಾಹಕರಿಗೆ ಕರವೇ ಬುದ್ಧಿ ಹೇಳಿ ಇನ್ನು ಮುಂದೆ ಪಾರ್ಸೆಲ್ ಕಳಿಸಕೂಡದು ಈ ಕ್ಯಾಂಟೀನ್ ನಲ್ಲಿ ಖುದ್ದಾಗಿ ಬಂದು ಊಟ ಮಾಡುವವರಿಗೆ ಮಾತ್ರ ಊಟ ಬಡಿಸಬೇಕು ಊಟ ತಿಂಡಿಯನ್ನು ಶುಚಿಯಾಗಿ ಹಾಗೂ ರುಚಿಯಾಗಿ ಮಾಡಬೇಕು ಕಡ್ಡಾಯವಾಗಿ ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕೆಂದು ಷರತ್ತು ವಿಧಿಸಿ ಕ್ಯಾಂಟೀನ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು.
ಈ ಸಂದರ್ಭ ಕರವೇಯ ಮಂಜುನಾಥ್. ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಬೋಪಯ್ಯ, ಜಗದೇಶ್, ದೀಪಕ್,ತಮ್ಮಯ್ಯ, ಹರ್ಷಿತ್ ಸಂದೀಪ್ ತಿಮ್ಮಯ್ಯ ಹಾಜರಿದ್ದರು.
Back to top button
error: Content is protected !!