ಕುಶಾಲನಗರ, ಜು 27: : ಮೀಸಲು ಅರಣ್ಯದಲ್ಲಿನ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಅನ್ಯ ಕೋಮಿನ ಯುವಕರು ದೇವಸ್ಥಾನದ ಬಳಿ ಮಣ್ಣಿನಿಂದ ಎರಡು ಸಮಾದಿ ನಿರ್ಮಿಸಿ,ಹೂವಿನಿಂದ ಅಲಂಕಾರ ಮಾಡಿ ನಮಾಜ್ ಮಾಡಿದ ಘಟನೆ ಮಾಲ್ದಾರೆ ಸಮೀಪದ ಗದ್ದಿಗೆ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.
ಮಾಲ್ದಾರೆಯಿಂದ ಪಿರಿಯಾಪಟ್ಟಣಕ್ಕೆ ತೆರಳುವ ಮಾರ್ಗದ ಮೀಸಲು ಅರಣ್ಯದ ಮದ್ಯೆ ಗದ್ದಿಗೆ ಶ್ರೀ ಸಿದ್ದೇಶ್ವರ ದೇವಾಲಯವಿದೆ. ಕಾಡಿನ ಮದ್ಯೆ ಇರುವ ಪುರಾತನ ದೇವಸ್ಥಾನವಾಗಿದ್ದು ಇಲ್ಲಿ ವರ್ಷದಲ್ಲಿ ಒಮ್ಮೆ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ವಾರ್ಷಿಕ ಪೂಜೆಗೆ ಜಿಲ್ಲೆ ಹೊರ ಜಿಲ್ಲೆಗಳಿಂದ ಸಾವಿರಾರು ಮಂದಿ ಭಕ್ತರು ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಮುಖ್ಯ ರಸ್ತೆಯಿಂದ ಸುಮಾರು ೧.೫ ಕಿ ಮೀ ದೂರದ ಕಡಿದಾದ ಬೆಟ್ಟವನ್ನು ಹತ್ತಿ ತೆರಳಬೇಕಾಗಿದೆ. ಮೀಸಲು ಅರಣ್ಯವಾಗಿರುವುದರಿಂದ ಶಿವರಾತ್ರಿ ದಿನ ಹೊರತುಪಡಿಸಿ ಉಳಿದ ದಿನ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಅರಣ್ಯ ಪ್ರದೇಶದಲ್ಲಿ ಅನಾವಶ್ಯಕವಾಗಿ ವಾಹನ ನಿಲುಗಡೆ ಕೂಡ ನಿಷೇಧಿಸಲಾಗಿದೆ. ಆದರೆ ಭಾನುವಾರದಂದು ಮುಖ್ಯರಸ್ತೆ ಬೆಟ್ಟದ ಮೇಲಿನ ದೇವಸ್ಥಾನದ ಬಳಿ ಅನ್ಯ ಕೋಮಿನ ಕೆಲವರು ದೇವಸ್ಥಾನದ ಕಟ್ಟಡಕ್ಕೆ ಹೊಂದಿಕೊಂಡಂತೆ ಎರಡು ಕಡೆಗಳಲ್ಲಿ ಮಣ್ಣಿನಲ್ಲಿ ಸಮಾದಿಯನ್ನು ನಿರ್ಮಿಸಿ ಹೂವಿನಿಂದ ಅಲಂಕಾರ ಮಡಿದಲ್ಲದೆ ಸ್ಥಳದಲ್ಲೇ ನಮಾಜ್ ಮಾಡುತ್ತಿರುವುದು ಕಂಡುಬಂದಿದೆ.ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ
Back to top button
error: Content is protected !!