ಆರೋಪ

ಹಿಂದೂ ಕಾರ್ಯಕರ್ತರ ವಿರುದ್ದ ದೂರು ದಾಖಲು: ಜಾಮೀನು‌ ಮಂಜೂರು

ಕುಶಾಲನಗರ, ಜು 03:: ಹಿಂದೂ ಕಾರ್ಯಕರ್ತರ ವಿರುದ್ದ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಒಬ್ಬರಿಗೆ ಜಾಮೀನು ಮಂಜೂರಾಗಿದೆ.

ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಹಿಂದೂ‌ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಖಂಡಿಸಿ ಕುಶಾಲನಗರದಲ್ಲಿ ನಡೆದ
ಜನಜಾಗೃತಿ ಆಂದೋಲನ ಸಂದರ್ಭ ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂಬ ದೂರಿನನ್ವಯ ಇಬ್ಬರ ವಿರುದ್ದ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜನಜಾಗೃತಿ ಆಂದೋಲನದಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಹಾಗೂ ಇವರಿಗೆ ಕಾರ್ಯಕ್ರಮ ಸಂಘಟಕ ಅಮೃತ್ ರಾಜ್ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಜಬೀವುಲ್ಲಾ ಎಂಬವರು ನೀಡಿದ ದೂರಿನನ್ವಯ ಇಬ್ಬರ ಮೇಲೆ
Bns 192, 299, 3(5) ಪ್ರಕರಣ ದಾಖಲಾಗಿತ್ತು. ಈ‌ ಹಿನ್ನೆಲೆಯಲ್ಲಿ ಸಂಘಟಕ ಅಮೃತ್ ರಾಜ್ ಅವರಿಗೆ ಜಾಮೀನು ಮಂಜೂರಾಗಿದ್ದು, ಸತೀಶ್ ದಾವಣಗೆರೆ ಕುಶಾಲನಗರಕ್ಕೆ ಹಾಜರಾದ ಬಳಿಕ ಜಾಮೀನು ಮಂಜೂರಾಗುವುದಾಗಿ ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!