ಕುಶಾಲನಗರ, ಜು 02: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕೊಡಗು ಜಿಲ್ಲೆಯ ವತಿಯಿಂದ ಕುಶಾಲನಗರದ ಕೂಡ್ಲೂರಿನ ಎಸ್ಎಲ್ಎನ್ ಕಾಫಿ ಸಂಸ್ಕರಣಾ ಘಟಕದ ಆವರಣದಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಬೆಂಕಿ ಆಕಸ್ಮಿಕ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಹೇಗೆ ಸುರಕ್ಷಿತವಾಗಿ ಕಾರ್ಯನಿರ್ವಹಿಸಬೇಕು, ಜೀವ ಸಂರಕ್ಷಣಾ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಎಸ್.ಎಲ್.ಎನ್.ಸಿಬ್ಬಂದಿಗಳಿಗೆ ಅಣಕು ಪ್ರದರ್ಶನದೊಂದಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು.
ಈ ಸಂದರ್ಭ
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್ ಭಂಡಾರಿ, ಅಗ್ನಿಶಾಮಕ ಠಾಣಾಧಿಕಾರಿ ಶೋಭಿತ್ ಪಿ. ಕೆ ಮತ್ತು ಕುಶಾಲನಗರ ಹಾಗೂ ಮಡಿಕೇರಿ ಠಾಣೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
Back to top button
error: Content is protected !!