ಕುಶಾಲನಗರ, ಜೂ 01: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನ ಆಚರಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಅಧ್ಯಕ್ಷತೆಯಲ್ಲಿ ನಗರಾಧ್ಯಕ್ಷ ಯೋಗೇಶ್ ನೇತೃತ್ವದಲ್ಲಿ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ,
ಸಮಾಜದಲ್ಲಿ ವೈದ್ಯರ ಪಾತ್ರ ಹಾಗೂ ಸೇವೆ ಅನನ್ಯವಾದದು. ಜೀವ ರಕ್ಷಕರಾಗಿ ಸದಾ ತಮ್ಮ ಜೀವನವನ್ನು ಸೇವೆಗೆಂದು ಅರ್ಪಿಸಿಕೊಂಡಿರುವ ವೈದ್ಯರಿಗೆ ಅಗತ್ಯ ಪ್ರೋತ್ಸಾಹ ಅಗತ್ಯವಿದೆ. ಅವರ ಪರಿಸ್ಥಿತಿ ಅರಿತುಕೊಳ್ಳದೆ ಸೇವಾ ನ್ಯೂನತೆಗೆ ಅನಗತ್ಯ ಆರೋಪಗಳನ್ನು ಮಾಡಿ ತೆಗಳದೆ ಅವರನ್ನು ಪ್ರೀತಿಯಿಂದ ಆಧರಿಸುವ ಮೂಲಕ ನಮ್ಮ ಆರೋಗ್ಯ ಸೇವೆ ಅಬಾಧಿತವಾಗಿ ಪಡೆದುಕೊಳ್ಳಲು ಸಂಘಟನೆಗಳು ಮುಂದಾಗಬೇಕಿದೆ ಎಂದರು.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್ ಮಾತನಾಡಿದರು.
ಸರಕಾರದ ವ್ಯವಸ್ಥೆಯಲ್ಲಿ ರೋಗಿಗಳ ಸಂಖ್ಯೆಗೆ ತಕ್ಕಂತೆ ವೈದ್ಯರು, ಶುಶ್ರೂಷಕರ ಕೊರತೆ ಹಿನ್ನೆಲೆಯಲ್ಲಿ ಸೇವೆಯಲ್ಲಿ ಕೆಲವೊಮ್ಮೆ ಅಡಚಣೆಯಾಗಲಿದೆ. ಆದರೆ ಸಾಮಾನ್ಯ, ಬಡಜನರ ಸೇವೆ ಗೆಂದೇ ವೈದ್ಯ ವೃತ್ತ ಆರಿಸಿಕೊಂಡು ಬಂದಿರುವ ವೈದ್ಯರನ್ನು ಕುಗ್ಗಿಸುವ ಕಾರ್ಯ ನಡೆಯಬಾರದು. ಏನೇ ಸಮಸ್ಯೆ ಕೊರತೆಗಳಿದ್ದಲ್ಲಿ ನೇರವಾಗಿ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಇಂದೂಧರ್, ಆರೋಗ್ಯ ಕೇಂದ್ರದ ಡಾ.ಪ್ರಾಣೇಶ್, ಡಾ.ಶಿವಪ್ರಸಾದ್, ಡಾ.ಕೀರ್ತಿರಾಜು, ಡಾ.ಚಿರಸ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಮಡಿಕೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಆಸಿಫ್, ತಾಲೂಕು ಉಪಾಧ್ಯಕ್ಷ ಮಂಡ್ಯ ಪರಮೇಶ್, ನಗರ ಕಾರ್ಯದರ್ಶಿ ಗಣೇಶ್, ನಗರ ಉಪಾಧ್ಯಕ್ಷರಾದ ರವಿ, ಡಿ.ಎನ್,ಭವ್ಯ, ಸೋಮವಾರಪೇಟೆ ನಗರ ಕಾರ್ಯದರ್ಶಿ ರವೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್, ಸುಂಟಿಗೊಪ್ಪ ಹೋಬಳಿ ಅಧ್ಯಕ್ಷ ಪವನ್, ಪ್ರಮುಖರಾದ ಪಾಂಡುರಂಗ, ಶಶಿಕಲಾ, ಮಂಜುನಾಥ್, ಕೋಟಿ ಮಂಜು, ದಿವಾಕರ್ ಇದ್ದರು.
Back to top button
error: Content is protected !!