ಕುಶಾಲನಗರ, ಜೂ 07:ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ಪಂಚಾಯತಿ ಮಟ್ಟದ ಮಾನ್ಸೂನ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ವಾಲ್ನೂರು ಸಚಿನ್ ಫ್ರೆಂಡ್ಸ್ ವತಿಯಿಂದ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ಶಕ್ತಿ ಫ್ರೆಂಡ್ಸ್ ನಂಜರಾಯಪಟ್ಟಣ ಪ್ರಥಮ, ಸ್ಕೈ ಕ್ರಿಕೆಟರ್ಸ್ ನೆಲ್ಲಿಹುದಿಕೇರಿ ದ್ವಿತೀಯ, ವಿಸಿಟರ್ಸ್ ಗುಡ್ಡೆಹೊಸೂರು ತೃತೀಯ ಹಾಗೂ ಚತುರ್ಥ ಪ್ರಶಸ್ತಿಯನ್ನು ಸಿಸಿಎಂ ಮಾರುತಿನಗರ ಹೊಸಕೋಟೆ ತಂಡ ತನ್ನದಾಗಿಸಿಕೊಂಡಿತ್ತು.
ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ರಕ್ಷಿತ್ ಮಾವಜಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಯ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿದ ಮೂಲಭೂತ ಅಭಿವೃದ್ಧಿ ಕೆಲಸ, ಜನ ಸ್ನೇಹಿ, ಜನ ಸ್ಪಂದನೆ ಸ್ವಭಾವವನ್ನು ಗುರುತಿಸಿ ಹಾಗೂ ಹೊಸಪಟ್ಟಣ ಸಾರ್ವಜನಿಕ ಮೈದಾನದಲ್ಲಿ ತಮ್ಮ ಪಂಚಾಯಿತಿ ಅನುದಾನದಲ್ಲಿ 1 ಲಕ್ಷ ವೆಚ್ಚದ ಕ್ರಿಕೆಟ್ ಪಿಚ್ ಅನ್ನು ವರುಷದ ಎಲ್ಲಾ ದಿನದಲ್ಲೂ ಕ್ರೀಡಾಪಟುಗಳಿಗೆ ಆಡಲು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಆಯೋಜಕರ ವತಿಯಿಂದ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತ್ತು
ಸಮಾರೋಪ ಕಾರ್ಯಕ್ರಮದಲ್ಲಿ ಪ್ರಮುಖರಾದ ಅಪ್ಪು ಸೇಬಸ್ತಿನ್, ವಿಜೇಶ್, ರಾಜೇಶ್ ತಂಟೆಪಾಡಿ, ಅಜಯ್ ಮಾವಜಿ, ಯೋಗೇಶ್, ಮ್ಯಾತಿವ್ ಕೊಚ್ಚೆ, ಶ್ರೀಜೆಸ್ ಕುಟ್ಟ, ಅರೀಸ್, ಶರತ್ ಪಟ್ಲಮಂಟಿ, ಕಿರಣ್ ಪುಟ್ಟ, ಮಿಥುನ್, ಶರತ್ ಕಳಂಜನ,ಉದಯ್ ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಯನ್ನು ಮಧು ಅವರು ನೆರವೇರಿಸಿಕೊಟ್ಟರು.
Back to top button
error: Content is protected !!