ಆರೋಗ್ಯ

ಕುಶಾಲನಗರ ಸೋಮೇಶ್ವರ ಬಡಾವಣೆಯಲ್ಲಿ ಲಾರ್ವಾ ಸಮೀಕ್ಷೆ

ಕುಶಾಲನಗರ, ಮೇ 29: ದಿನಾಂಕ 29.05.2026ರಂದು ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಾಲೂಕಿನ ಆರ್‌ಆರ್‌ಟಿ ತಂಡದ ವತಿಯಿಂದ ಸೋಮೇಶ್ವರ ಬಡಾವಣೆಯಲ್ಲಿ ಡೆಂಗ್ಯೂ ಮತ್ತು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಶಿಕ್ಷಣವನ್ನು ನೀಡಿ ನಾಲ್ಕು ತಂಡಗಳು 98 ಮನೆಗಳಲ್ಲಿ, 431 ತಾಣಗಳಲ್ಲಿ ಲಾರ್ವ ಸಮೀಕ್ಷೆಯನ್ನು ಮಾಡಲಾಗಿದ್ದು 11 ತಾಣಗಳಲ್ಲಿ ಲಾರ್ವ ಕಂಡುಬಂದಿದ್ದು ಮನೆಯವರ ಸಹಾಯದಿಂದ ಲಾರ್ವವನ್ನು ನಾಶಪಡಿಸಲಾಯಿತು.ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಇಂದೂಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಶಾಂತಿ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಪೂರ್ಣ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ ಜನಾರ್ದನ್ ಮೇಲ್ವಿಚಾರಣೆ ಮಾಡಿದರು, PHCOs HIOs ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!