ಕೂಡಿಗೆ, ಮೇ. 17: ಕೂಡಿಗೆ ಕ್ರೀಡಾ ಪ್ರೌಢಶಾಲೆಯಲ್ಲಿ 3 ಕೋಟಿ ರೂ ವೆಚ್ಚದಲ್ಲಿ ಹಾಕಿ ಮೈದಾನದ ಅಸ್ಟ್ರೋಟರ್ಫ್ ಹೆಚ್ಚುವರಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ರವರು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡುತ್ತಾ ಗ್ರಾಮಾಂತರ ಪ್ರದೇಶದ ಯುವಕ ಯುವತಿಯರು, ಕ್ರೀಡಾ ಶಾಲೆಗೆ ಅಯ್ಕೆಗೊಂಡ ನಂತರ ತಮ್ಮ ಸಾಮರ್ಥ್ಯವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿಸುವ ಅವಕಾಶಕ್ಕೆ ಪೂರಕವಾಗಿ ರಾಷ್ಟ್ರೀಯ ಕ್ರೀಡಾ ನಿಯಮಾನುಸಾರ ಇಂತಹ ಮೈದಾನದ ಅವಶ್ಯಕತೆ ಪ್ರಮುಖ ವಾಗಿರುತ್ತದೆ, ಅದರಿಂದಲೇ ರಾಜ್ಯ ಸರ್ಕಾರ ಕ್ರೀಡಾ ಇಲಾಖೆಯ ನಿಯಮ ಅಡಿಯಲ್ಲಿ ಕ್ರೀಡಾ ಶಾಲೆಗಳ ಅಭಿವೃದ್ಧಿ, ಮತ್ತು ಮೈದಾನದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಜಾರಿಗೆ ತರುವ ಮೂಲಕ ಮೂರು ಕೋಟಿ ವೆಚ್ಚದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿ ಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣದ ಕ್ರೀಡಾಭಿವೃಧ್ಧಿಗೆ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ ಕ್ರೀಡಾಂಗಣದ ಅಭಿವೃದ್ಧಿ ಮೂಲಕ ಕ್ರೀಡಾ ಶಾಲಾ ವಿದ್ಯಾರ್ಥಿಗಳ ಪ್ರಗತಿಗೆ ಪೂರಕ,ಮತ್ತು ಶಾಲೆಗೆ ಸಂಬಂಧಿಸಿದ ಸುಸಜ್ಜಿತ ಕ್ರೀಡಾಂಗಣ, ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳುವ ಮುಖೇನ ಕ್ರೀಡಾ ಶಾಲೆಯ ಅಭಿವೃದ್ಧಿ ಸಾದ್ಯ, ಜಿಲ್ಲೆಯ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಕ್ರೀಡಾ ಇಲಾಖೆಯ ಕಟ್ಟಡಗಳ ಉನ್ನತಿ ಕರಣ ಮುಖೇನ ಅಭಿವೃದ್ಧಿ ಜೊತೆಯಲ್ಲಿ ಕ್ರೀಡಾಪಟುಗಳು ತನ್ನ ಬದುಕಿಗೆ ಪೂರಕವಾದ ಉದ್ಯೋಗವನ್ನು ಪಡೆಯುಲು ಅನುಕೂಲ ಕಲ್ಪಿಸುವ ವ್ಯವಸ್ಥೆ ಆಗಬೇಕಾಗಿದೆ ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಸಚಿವಾಲದೊಂದಿಗೆ ಚರ್ಚಿಸಲಾಗುವುದು, ರಾಜ್ಯದಲ್ಲಿ ಕ್ರೀಡಾ ಪಟುಗಳಿಗೆ ಉದ್ಯೋಗದಲ್ಲಿ ಶೇಕಡಾ 2% ರಿಯಾಯಿತಿ ಇರುವುದರಿಂದ ಪ್ರಶಸ್ತಿ ಪತ್ರದ ಬದಲಾವಣೆ ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ , ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್, ಪದವಿಪೂರ್ವ ಕಾಲೇಜು ಉಪಾಧ್ಯಕ್ಷ ಸೋಮಶೇಖರ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಫಿಲೋಮಿನಾ, ಈರಪ್ಪ, ಚಂದ್ರ, ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್,
ಕ್ರೀಡಾ ತರಬೇತಿದಾರರಾದ ವೆಂಕಟೇಶ್, ದಿನಾಮಣಿ, ಸುರೇಶ್, ಗುತ್ತಿಗೆದಾರ ಮಂಜುನಾಥ, ಶಾಲಾ ಮುಖ್ಯೋಪಾಧ್ಯಾಯನಿ ಅಶ್ವಿತ್, ಶಿಕ್ಷಕರ ವೃಂದ, ಸೇರಿದಂತೆ ವಿವಿಧ ವಿಭಾಗದ ತರಬೇತಿದಾರರು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!