ಕುಶಾಲನಗರ, ಮೇ 03:ದಿನಾಂಕ:03/4/2026 ಭಾನುವಾರ, ಇಂಡಿಯನ್ ಆರ್ಟ್ ಅಂಡ್ ಕಲ್ಚರ್ ಫೆಡರೇಷನ್ (ರಿ) ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನೋಬೆಲ್ ವರ್ಡ್ ರೆಕಾರ್ಡ್ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾ ಕೊಡಗಿನ ಏಕೈಕ ನೃತ್ಯ ಸಂಸ್ಥೆಯಾಗಿ ಭಾಗವಹಿಸಿದ್ದ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಯೋಜಕ ಅಕ್ತರ್ ರವರ ಉತ್ತಮ ನೃತ್ಯ ಸಂಯೋಜನೆ ಮತ್ತು ನೃತ್ಯ ಜೀವನದ ಹೆಚ್ಚಿನ ಅನುಭವಗಳನ್ನು ಗುರುತಿಸಿ ಇಂಟರ್ನ್ಯಾಷನಲ್ ಕಲ್ಚರ್ ಕೌನ್ಸಿಲ್ (ICC), ಮಿನಿಸ್ಟರಿ ಆಫ್ ಕಲ್ಚರ್ ಗವರ್ನಮೆಂಟ್ ಆಫ್ ಇಂಡಿಯಾ, ಕ್ವಿಟ್ ಇಂಡಿಯಾ, ತಮಿಳುನಾಡು ಆರ್ಟ್ ಅಂಡ್ ಕಲ್ಚರ್ ಕೌನ್ಸಿಲ್ ಮತ್ತು ಇಂಡಿಯನ್ ಆರ್ಟ್ ಅಂಡ್ ಕಲ್ಚರ್ ಕೌನ್ಸಿಲ್ ವತಿಯಿಂದ ಮಾಸ್ಟರ್ ಆಫ್ ಕಲ್ಚರ್ ಆರ್ಟ್ಸ್ (MCA) ಮತ್ತು ಉತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ನೃತ್ಯ ಸಂಯೋಜಕ ಅಕ್ತರ್ ರವರ ತಂದೆ ಸಾಧಿಕ್ ಅಹಮದ್ ಮತ್ತು ತಾಯಿ ಜಾಹಿರಾ ರವರ ದ್ವಿತೀಯ ಪುತ್ರ ಆಗಿದ್ದು ಪ್ರಸ್ತುತ ಕುಶಾಲನಗರದ ನಿವಾಸಿಯಾಗಿದ್ದು ಸತತ ನಾಲ್ಕು ವರ್ಷಗಳಿಂದ ಕೂಡಿಗೆ ಗ್ರಾಮದಲ್ಲಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಎಂಬ ನೃತ್ಯ ಸಂಸ್ಥೆಯನ್ನು ನಡೆಸುತ್ತಾ ತನ್ನ ನೃತ್ಯ ಜೀವನದಲ್ಲಿ ಉತ್ತಮ ವೇದಿಕೆಗಳನ್ನು ಮತ್ತು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿರುತ್ತಾರೆ. ಕುಶಾಲನಗರದ ಹೆಮ್ಮೆಯ ಅಕ್ತರ್ ರವರಿಗೆ ಈ ಪ್ರಶಸ್ತಿ ದೊರಕಿರುವುದರ ಬಗ್ಗೆ ತನ್ನ ಪೋಷಕರು, ಕುಟುಂಬಸ್ಥರು, ಗ್ರಾಮಸ್ಥರು, ಸ್ನೇಹಿತರು ಮತ್ತು ನೃತ್ಯ ಶಾಲೆಯ ಪೋಷಕ ವೃಂದದವರು ಇವರ ಸಾಧನೆಯ ಮೆಚ್ಚುಗೆಗೆ ಪಾತ್ರರಾಗಿ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಲು ಹರಸಿ ಪ್ರೋತ್ಸಾಹಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು.
Back to top button
error: Content is protected !!