ಪೊಲೀಸ್

ಅಪ್ರಾಪ್ತೆಗೆ ನಿಶ್ಚಿತಾರ್ಥ: ಕಾರ್ಯಕ್ರಮ ಮೊಟಕುಗೊಳಿಸಿದ ಅಧಿಕಾರಿಗಳು

ಕುಶಾಲನಗರ, ಏ 21: ಕುಶಾಲನಗರದ ಮುಳ್ಳುಸೋಗೆ ಗ್ರಾಮದಲ್ಲಿ ಅಪ್ರಾಪ್ತೆಗೆ ನಡೆಸಲು ಉದ್ದೇಶಿಸಿದ್ದ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅಧಿಕಾರಿಗಳು ಮೊಟಕುಗೊಳಿಸಿದ‌ ಪ್ರಸಂಗ ನಡೆದಿದೆ.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ 15 ವರ್ಷ ‌ಪ್ರಾಯದ ಅಪ್ರಾಪ್ತೆಗೆ ಪಿರಿಯಾಪಟ್ಟಣ ಯುವಕನೊಂದಿಗೆ ನಿಶ್ಚಿತಾರ್ಥದ ಏರ್ಪಡಿಸಲಾಗಿತ್ತು. ಸ್ಥಳೀಯರ‌ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಮಹಿಳಾ ಮತ್ತು‌ ಮಕ್ಕಳ‌ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಶ್ರೀದೇವಿ, ಜಿಲ್ಲಾ ಮಕ್ಕಳ‌ ಸಹಾಯ ವಾಣಿಯ ಯೋಗೇಶ್ ಎ.ಎಸ್ ಅವರು ಕುಶಾಲನಗರ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಮೊಟಕುಗೊಳಿಸಿ ಪೋಷಕರಿಗೆ ತಿಳುವಳಿಕೆ ನೀಡಿ ಮಕ್ಕಳ‌ ಕಲ್ಯಾಣ‌ ಸಮಿತಿಗೆ ಮುಂದಿ ಕ್ರಮಕ್ಕೆ ಹಸ್ತಾಂತರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!