ಕಾರ್ಯಕ್ರಮ

ಕುಶಾಲನಗರದ ದಂಡಿನಪೇಟೆ ನೂರ್ ಮಸೀದಿ ಆವರಣದಲ್ಲಿ ನಿರ್ಮಿಸಿದ ಸೋಲಾರ್ ವಿದ್ಯುತ್ ಘಟಕ ಲೋಕಾರ್ಪಣೆ

ಕುಶಾಲನಗರ, ಏ 15:ಕುಶಾಲನಗರದ ದಂಡಿನಪೇಟೆ ನೂರ್ ಮಸೀದಿ ಆವರಣದಲ್ಲಿ ನಿರ್ಮಿಸಿದ ಸೋಲಾರ್ ವಿದ್ಯುತ್ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಅಂದಾಜು 9 ಲಕ್ಷ ರು. ವೆಚ್ಚದಲ್ಲಿ 10 ಕೆ ವಿ ಎ ಸಾಮರ್ಥ್ಯದ ನೂತನ ಸೋಲಾರ್ ಘಟಕಕ್ಕೆ ಮಸೀದಿ ಧರ್ಮ ಗುರುಗಳಾದ ರಶೀದ್ ಅಹಮದ್ ಮತ್ತು ಮಹಮ್ಮದ್ ಯೂಸುಫ್ ಸಮ್ಮುಖದಲ್ಲಿ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ ಎ ಶಬೀರ್ ಪಾಷಾ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಬ್ಬೀರ್ ಪಾಷಾ ಅವರು 5 ಕೆವಿಎ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು ಮಸೀದಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಕಲ್ಪಿಸಲಾಗುತ್ತದೆ. ಮತ್ತು ಮಸೀದಿಯ ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಆಗುತ್ತಿದ್ದು ಹೆಚ್ಚುವರಿ ವಿದ್ಯುತ್ ಅನ್ನು ಗ್ರೀಡ್ ಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಇದುವರೆಗೆ ಸೆಸ್ಕ್ ಸಂಸ್ಥೆಗೆ
ತಿಂಗಳೊಂದಕ್ಕೆ ಕಟ್ಟಡದ ವಿದ್ಯುತ್ ಬಾಪ್ತು ಸುಮಾರು 12 ರಿಂದ 15 ಸಾವಿರ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದು ಇದೀಗ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಟ್ಟಡದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದು, ಈ ಯೋಜನೆಯಿಂದ ಸುತ್ತಮುತ್ತಲಿನ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಇಲಿಯಾಸ್, ಕಾರ್ಯದರ್ಶಿ ಎಂ ಜೆ ಇರ್ಫಾನ್ ಘಟಕ ಕಾರ್ಯನಿರ್ವಹಣಾ ಉಸ್ತುವಾರಿ ಮುಜೀಬ್ ಉರ್ ರೆಹಮಾನ್, ಜಾಮಿಯಾ ಮಸೀದಿಯ ಆಡಳಿತ ಅಧಿಕಾರಿ ರಫೀಕ್ ಅಹಮದ್ ಮತ್ತು ಸ್ಥಳೀಯ ಮುಖಂಡರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!