ಕುಶಾಲನಗರ, ಮಾ 16: ಸೋಮವಾರ ಸಂಜೆ ಸುರಿದ ಮಳೆ ಶಿರಂಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದೆ. ಚಿಕ್ಕನಾಯಕನಹೊಸಳ್ಳಿ ಗ್ರಾಮದ ಹರೀಶ್ ಮತ್ತು ಫಾಲ್ಗುಣ ಸಹೋದರರ ಹಂಚಿನ ಮನೆ ಮೇಲೆ ತೆಂಗಿನ ಮರ ತುಂಡರಿಸಿ ಬಿದ್ದಿದೆ. ಗಾಳಿಗೆ ಹಂಚುಗಳು ಹಾರಿಹೋಗಿವೆ. ಟ್ರಾಕ್ಟರ್ ಗೆ ಹಾನಿಯಾಗಿದೆ. ಹಂಚು ಹಾರಿಹೋದ ಪರಿಣಾಮ ಮನೆಯೊಳಗಿದ್ದ ಹೊಗೆಸೊಪ್ಪು, ಧವಸಧಾನ್ಯ ಮಳೆಯಿಂದ ಹಾನಿಯಾಗಿದೆ.
ಸಮೀಪದ ಎಸ್.ಹೆಚ್. ಸುಂದರ ಎಂಬವರ ಮನೆ ಹಾಗೂ ಕೊಟ್ಟಿಗೆ ಶೀಟ್ ಗಳು ಹಾರಿಹೋಗಿ ಮೂಟೆಗಳಲ್ಲಿ ಶೇಖರಿಸಿಟ್ಟಿದ್ದ ಮೂಟೆಗಳಲ್ಲಿ ಭತ್ತ, ರಾಗಿ ತೊಯ್ದುಹೋಗಿವೆ. ಘಟನೆಯಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ.
ಶಿರಂಗಾಲದ ವೆಂಕಟೇಶ್, ಶಾರದಮ್ಮ ಎಂಬವರ ಮನೆಯ ಮೇಲ್ಛಾವಣಿ ಹಾಗೂ ಗೋಡೆಗಳು ಹಾನಿಯಾಗಿವೆ.
ಸ್ಥಳಕ್ಕೆ ಕಂದಾಯ ಇಲಾಖೆ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.
Back to top button
error: Content is protected !!