ಕುಶಾಲನಗರ, ಮಾ 05: ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಫಾಲ್ಗುಣ ಪೂರ್ಣಿಮೆ ಅಂಗವಾಗಿ ಆರತಿ ಪೂಜಾ ಕಾರ್ಯಕ್ರಮವು ಜರುಗಿತು.
ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಜೇನು, ಎಳನೀರು,ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು.
ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು.
ಬೆಂಗಳೂರಿನ
ಕೌಶಿಕ್ ಸುನಂದಾ ಕುಟುಂಬಸ್ಥರು ಮತ್ತು ಬೇಲೂರಿನ ಸುರೇಶ್, ವನಿತಾ ಕುಟಂಬಸ್ಥರಿಂದ ದಿನದ ಪೂಜಾ ಸೇವಾರ್ಥ ನಡೆಯಿತು.
ಈ ಸಂದರ್ಭ ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಚಂದ್ರು, ತಿಲಕ್ ಪೂಜಾರಿ, ರುದ್ರ, ಕಾವೇರಿಮಣಿ, ವಿನು ಅಯ್ಯಪ್ಪ, ವೆಳ್ಳಿಯಪ್ಪ ಮತ್ತಿತರರು ಹಾಜರಿದ್ದರು.
Back to top button
error: Content is protected !!