ಕಾರ್ಯಕ್ರಮ
ಕುಶಾಲನಗರದಲ್ಲಿ ಪುಲ್ವಾಮ ಹುತಾತ್ಮರಿಗೆ ಶ್ರದ್ದಾಂಜಲಿ ಕಾರ್ಯಕ್ರಮ


ಕುಶಾಲನಗರ, ಫೆ 14: ಕೊಡಗು ಜಿಲ್ಲಾ ಅರೆಸೇನಾ ಪಡೆ ಮಾಜಿ ಯೋಧರ ಒಕ್ಕೂಟದಿಂದ ಕುಶಾಲನಗರದಲ್ಲಿ ಪುಲ್ವಾಮ ಹುತಾತ್ಮರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.