ಕುಶಾಲನಗರ, ಫೆ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರದರ್ಶಿಸಿದ್ದ ಜಾಹಿರಾತನ್ನು ಟಿ.ಎ.ನಾರಾಯಣ ಗೌಡರ ಕರವೇ ಪ್ರಮುಖರು ಕಿತ್ತು ಆಕ್ರೋಶ ವ್ಯಕ್ತಪಡಿಸಿದರು.
ಕರಾರಸಾಸಂ ಎಂಬ ಹೆಸರಿನೊಂದಿಗೆ ಇದ್ದ ಸಂಸ್ಥೆಯ ಚಿನ್ಹೆಯನ್ನು ಮಾರೆಮಾಚುವಂತೆ ಜಾಹಿರಾತುಗಳು ರಾರಾಜಿಸುತ್ತಿವೆ ಎಂದು ಆರೋಪಿಸಿದ ಕರವೇ ಮುಖಂಡರು ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ನೇತೃತ್ವದಲ್ಲಿ ಕುಶಾಲನಗರ ನಿಲ್ದಾಣದಲ್ಲಿ ಬಸ್ ಮೇಲ್ಮೈನಲ್ಲಿ ಅಂಟಿಸಿದ್ದ ಪಾದರಕ್ಷೆ ಕಂಪನಿಯ ಸ್ಟಿಕರ್ ಹರಿದು ಬಿಸಾಡಿದರು.
ಸಾರಿಗೆ ಸಂಸ್ಥೆ ಸಾರ್ವಜನಿಕರ ಸ್ವತ್ತು. ಇತ್ತೀಚಿನ ದಿನಗಳಲ್ಲಿ ಈಗಿನ ಸರಕಾರ ಬಸ್ ಗಳ ಮೇಲೆ ಸಾರ್ವಜನಿಕರಿಗೆ ಪ್ರಯೋಜನವಿಲ್ಲದ ಜಾಹಿರಾತುಗಳ ಪ್ರಚಾರದಲ್ಲಿ ಹೆಚ್ಚು ಮಗ್ನವಾಗಿದೆ ಎಂದು ಆರೋಪಿಸಿದ ಮಡಿಕೇರಿ ಕ್ಷೇತ್ರ ಅಧ್ಯಕ್ಷ ಆನಂದ್ ಮತ್ತು ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಅವರು, ಸರಕಾರದ ನಡೆಯನ್ನು ಖಂಡಿಸಿದರು. ಮುಂದಿನ ದಿನಗಳಲ್ಲಿ ಬಸ್ ಗಳಲ್ಲಿ ಜಾಹಿರಾತು ಪ್ರದರ್ಶನ ವಿರುದ್ಸ ತೀವ್ರತರವಾದ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಎಚ್ಚರಿಸಿದರು.
ಈ ಸಂದರ್ಭ ತಾಲೂಕು ಉಪಾಧ್ಯಕ್ಷ ಫಯಾಜುದ್ದೀನ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ದೇವಾಂಗ, ಕಾರ್ಯದರ್ಶಿ ರಾಕೇಶ್ ಪಿ.ಬಿ, ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Back to top button
error: Content is protected !!