ಕುಶಾಲನಗರ, ಜ 26: ಗುಮ್ಮನಕೊಲ್ಲಿ ಸ.ಹಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಡೈಮಂಡ್ ಮಣಿ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಶಾಲೆಗಳ ಬಗ್ಗೆ ಕಡೆಗಣನೆ ಸಲ್ಲದು. ಮಕ್ಕಳ ಕೊರತೆಯಿಂದ ಶಾಲೆ ಮುಚ್ಚುವ ಪರಿಸ್ಥಿತಿಗೆ ತಲುಪದಂತೆ ಎಚ್ಚರವಹಿಸಬೇಕಿದೆ. ದಾನಿಗಳ ಸರಕಾರಿ ಶಾಲೆಗಳ ಉನ್ನತಿಗೆ ಕೈಜೋಡಿಸಬೇಕಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ
ಹೆಚ್.ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ದಿನೇಶ್ ಶೆಟ್ಟಿ ಮಾತನಾಡಿ, ಸರಕಾರ ಖಾಸಗಿ ಶಾಲೆಗಳ ಮಟ್ಟಿಗೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಸರಕಾರಿ ಶಾಲೆಗಳಲ್ಲಿ ಓದಿದವರಿಗೆ ಸರಕಾರಿ ಉದ್ಯೋಗದಲ್ಲಿ ಆದ್ಯತೆ ನೀಡಬೇಕಿದೆ. ಜಿಲ್ಲೆಯ ಬಹಳಷ್ಟು ಶಾಕೆಗಳು ಮುಚ್ಚುವ ಹಂತ ತಲುಪಿರುವುದು ನಮ್ಮ ಗಮನಕ್ಕೆ ಬಂದಿದ್ದು ಯಾವುದೇ ಶಾಲೆಗಳನ್ನು ಮುಚ್ಚದೆ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ ಎಂದು ಒತ್ತಾಯಿಸಿದರು.
ನಂತರ ಅವರು ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು.
ಇದೇ ಸಂದರ್ಭ ಡಾ.ಬಿ.ಎ.ದಿನೇಶ್ ಶೆಟ್ಟಿ, ಸಮಾಜ ಸೇವಕ
ಲೋಕೋಪಯೋಗಿ ಅಭಿಯಂತರ ಸೈಜನ್ ಪೀಟರ್, ನಿವೃತ್ತ ಶಿಕ್ಷಕಿ ಮೀನಾಕ್ಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿವರಾಮೇಗೌಡರ ಕರವೇ ನಗರಾಧ್ಯಕ್ಷ ಎಂ.ಎಸ್.ಮಣಿಕಂಠ, ತಾಲೂಕು ಸಂಚಾಲಕ ರಂಗಸ್ವಾಮಿ, ಗೌರವಾಧ್ಯಕ್ಷೆ ವಿ.ಹೆಚ್.ಪುಟ್ಟಮ್ಮ, ಪ್ರಮುಖರಾದ ನಿರ್ಮಲ, ಪುಟ್ಟಸ್ವಾಮಿ, ಪ್ರವೀಣ್ ಶೆಟ್ಟಿ ಕರವೇ ತಾಲೂಕು ಅಧ್ಯಕ್ಷ ಸಿ.ಎಂ.ಆಸಿಫ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರಮ್ಯ, ಮುಖ್ಯ ಶಿಕ್ಷಕಿ ಸಾಕಮ್ಮ, ಶಿಕ್ಷಕ ವೃಂದದವರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕರು ಹಾಜರಿದ್ದರು.
Back to top button
error: Content is protected !!